January 18, 2025
497e153e-17b7-423b-af95-44ae395988a8

ಜೂನ್ 10 ರಂದು ಮಂಗಳೂರು ವಕೀಲರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಮಂಗಳೂರಿನ ಪ್ರಸಿದ್ಧ ಸರಕಾರಿ ವಕೀಲ ಶ್ರೀ ಮನೋರಾಜ್ ರಾಜೀವ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು .

ಅವರು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಚ್ ವಿ ರಾಘವೇಂದ್ರರವರನ್ನು 125 ಮತಗಳ ಅಂತರದಲ್ಲಿ ಸೋಲಿಸಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

ಪ್ರತಿಷ್ಠಿತ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾಗಿ ನಮ್ಮ ಸಮಾಜದ ಬಂಧುವೊಬ್ಬರು ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ .
19 ವರ್ಷಗಳ ಹಿಂದೆ ಮಂಗಳೂರು ವಕೀಲರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಹಲವಾರು ಉತ್ತಮ ಯೋಜನೆಗಳನ್ನು ಮಂಜೂರು ಮಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಮನೋರಾಜ್ ರವರು ಇದೀಗ ಉಪಾಧ್ಯಕ್ಷರಾಗಿ ಅದೇ ರೀತಿಯ ಕಾರ್ಯ ವೈಖರಿಯ ಮೂಲಕ ಎಲ್ಲ ಸಹಪಾಠಿಗಳ ಮನ್ನಣೆ ಗಳಿಸುವುದರಲ್ಲಿ ಸಂಶಯವಿಲ್ಲ .

ಅವರ ಮುಂದಿನ ಅಧಿಕಾರದ ಅವಧಿಯು ಸುಗಮವಾಗಿರಲಿ , ಚುನಾವಣೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲು ಅವರಿಗೆ ಎಲ್ಲಾ ರೀತಿಯ ಸಹಕಾರ ದೊರೆಯಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರುತ್ತದೆ.

 

1 thought on “ಮನೋರಾಜ್ ರಾಜೀವರವರು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆ

Leave a Reply

Your email address will not be published. Required fields are marked *