January 19, 2025
IMG-20180608-WA0056 - Copy
Advt.
advt.
ಮೋಡದ ಮರೆಯಿಂದ ಮೊದಲ್ಗೊಂಡು, ಮೌನಕೋಗಿಲೆಯ ಮೋಹಕ ಕೊರಳ ದನಿಯಿಂದ ಯಶಸ್ಸಿನ ಉತ್ತುಂಗಕ್ಕೇರಿ,ಕಾವ್ಯಮಂಜರಿಯ ಕಥಾನಕದಿಂದ ಓದುಗರ ಬೃಹತ್ ಬಳಗವನ್ನು ಸೃಷ್ಟಿಸಿಕೊಂಡು,ಪ್ರತಿದಿನ ಹನಿಗವನಗಳ ಮೂಲಕ ಯುವಹೃದಯಗಳಿಗೆ ಕಚಗುಳಿಯಿಡುತ್ತ ಮೂರು ಸಾವಿರಕ್ಕೂ ಹೆಚ್ಚು ಕವನ ಗುಚ್ಛಗಳನ್ನು ಹೆಣೆದು,ಕೆಲವೇ ಪದಗಳಲ್ಲಿ ಹಲವು ಅರ್ಥ ಕೊಡುವ ಹಾಯ್ಕುಗಳೆಂಬ ಕೋಲ್ಮಿಂಚನ್ನು ಸೃಷ್ಟಿಸಿ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಸ್ಥಾಪಿಸಿಕೊಂಡಿರುವ ಭಂಡಾರಿ ಸಮಾಜದ ಹೆಮ್ಮೆಯ ಬರಹಗಾರ,ಲೇಖಕ,ಪ್ರೇಮಕವಿ ಕಿಶೋರ್ ಭಂಡಾರಿ ಎಕ್ಕಾರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಉದ್ಯೋಗನಿಮಿತ್ತ ದೂರದ ದೇಶದಲ್ಲಿದ್ದರೂ,ತನ್ನೆಲ್ಲಾ ಕೆಲಸದ ಒತ್ತಡದ ಮಧ್ಯೆಯೂ ತನ್ನೂರಿಗಾಗಿ,ತನ್ನವರಿಗಾಗಿ ಸದಾ ಮಿಡಿಯುವ ಸಹೃದಯಿ ಇವರು.ಸಂಘ ಸಂಸ್ಥೆಯ ಮೂಲಕ ಅಸಹಾಯಕರಿಗೆ ನೆರವು ನೀಡುತ್ತಾ,ಹುಟ್ಟಿದ ಊರು ಓದಿದ ಶಾಲೆ ಎಂಬ ಅಭಿಮಾನದಿಂದ ಸಹಾಯ ಹಸ್ತ ಚಾಚುತ್ತಾ,ಊರಿನೊಂದಿಗೆ ನಿಕಟ ಸಂಬಂಧವನ್ನು ಕಾಪಾಡಿಕೊಂಡು ಬಂದಿರುವ ಕಿಶೋರ್ ಸ್ನೇಹಿತರ ಹುಟ್ಟು ಹಬ್ಬ,ಮದುವೆಯ ವಾರ್ಷಿಕೋತ್ಸವ,ಆತ್ಮೀಯರ ಮಕ್ಕಳ ಹುಟ್ಟು ಹಬ್ಬ ಮತ್ತು ಕೆಲವು ವಿಶೇಷ ಸಂದರ್ಭಗಳನ್ನು ನೆನಪಿಟ್ಟುಕೊಂಡು ಅವರಿಗೆ ತಮ್ಮ ಕವನರೂಪದ ಹಾರೈಕೆಯ ಮೂಲಕ ಅಚ್ಚರಿ ಮೂಡಿಸುವುದನ್ನು  ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.ಅವರ ಈ ಸ್ವಭಾವವೇ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಸಾಹಿತ್ಯ ಕೃಷಿ ಅಷ್ಟು ಸುಲಭದ ಮಾತಲ್ಲ.ತಾಯಿ ಶ್ರೀ ಶಾರದೆಯ ಕೃಪಾಶೀರ್ವಾದಿಂದ ಮಾತ್ರ ಇಷ್ಟು ಸಾಧನೆ ಮಾಡಲು ಸಾಧ್ಯ.ಶ್ರೀ ಶಾರದೆಯು ತನ್ನ ಪೂರ್ಣಾನುಗ್ರಹವನ್ನಿತ್ತು ನಿಮ್ಮನ್ನು ಹರಸಲಿ.ಸಾಹಿತ್ಯ ಕ್ಷೇತ್ರದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುವಂತಹ ಸಾಧನೆ ಮಾಡಲು ಶಕ್ತಿಯನ್ನು,ಜ್ಞಾನವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ,ಭಂಡಾರಿವಾರ್ತೆ ತಂಡದ ಪರವಾಗಿ, ಓದುಗರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
Advt.
advt.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *