

ಮಾನವನ ಜೀವನದಲ್ಲಿ ಹಲವಾರು ಸಂಬಂಧಗಳು ಬಂದು ಹೋಗುತ್ತವೆ. ಆದರೆ ರಕ್ತ ಸಂಬಂಧವೇ ಇಲ್ಲದೆ ಜೊತೆಯಾಗಿ ಸಾಗುವ ಬಂಧ ಒಂದಿದ್ದರೆ ಅದು ಸ್ನೇಹ ಮಾತ್ರ. ನನಗೊಂದು ಸಂದೇಶ ಓದಿದ ನೆನಪು. ” ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ”. ಎಷ್ಟು ಅರ್ಥಪೂರ್ಣವಾದ ಮಾತು.
ಹೌದು ಗೆಳೆತನ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯವೇ ಸರಿ. ಏನೂ ಅರಿಯದ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ-ಅಜ್ಜಿಯರ ತನಕವೂ ಅವರದೇ ಆದ ಸ್ನೇಹ ಬಳಗವಿರುತ್ತದೆ. ತಂದೆ-ತಾಯಿ, ˌಮಗ-ಮಗಳು, ˌಗಂಡ-ಹೆಂಡತಿ,ˌ ಗುರು-ಶಿಷ್ಯರ ನಡುವೆ ಸಹ ಒಂದು ಅದ್ಭುತ ಗೆಳೆತನವಿರುತ್ತದೆ. ಆಗ ಮಾತ್ರ ಒಬ್ಬನೊಬ್ಬರು ಅರ್ಥೈಸಿಕೊಂಡುಹೊಂದಾಣಿಕೆಯಿಂದ ಸಾಗಲು ಸಾಧ್ಯ. ಈ ಸ್ನೇಹ ಎಂಬ ಸಂಪತ್ತು ಗಳಿಸಲು ಸುಲಭವೇನಿಲ್ಲ. ಅದೊಂದು ಜವಾಬ್ದಾರಿ. ಬದುಕಿನ ಕೊನೆಯವರೆಗೂ ನಿಭಾಯಿಸಿಕೊಂಡು ಹೋಗಬೇಕು.
ಸಜ್ಜನರ ಸ್ನೇಹ ಹೆಜ್ಜೇನು ಸವಿದಂತೆ ಎಂದು ಹಿರಿಯರು ತಿಳಿಸಿದ್ದಾರೆ. ಅದೇ ರೀತಿ ಪ್ರಾಣ ನೀಡುವ ಗೆಳೆಯರಿದ್ದಾರೆ. ಹಾಗೆಯೇ ಸಮಯ ಸಾಧಕ ಸ್ನೇಹಿತರೂ ಇದ್ದಾರೆ. ಅವರಿಗೆ ಬೇಕಾದಾಗ ನಟಿಸಿ ಉಪಕಾರ ಪಡೆದುಕೊಂಡು ಮತ್ತೆ ಪರಿಚಯವೇ ಇಲ್ಲದವರ ಹಾಗೆ ಇರುವವರಿದ್ದಾರೆ. ˌಹೊಸ ಗೆಳೆಯರು ಸಿಕ್ಕ ನಂತರ ಪ್ರತಿಕ್ಷಣ ಜೊತೆಗಿದ್ದವರನ್ನು ಮರೆತುಬಿಡುವವರು ಇದ್ದಾರೆ. ಈ ಇಬ್ಬರಿಂದಲೇ ಹೆಚ್ಚು ನಮ್ಮ ಭಾವನೆಗಳಿಗೆ ನೋವು ಉಂಟಾಗುವುದು.
ಗೆಳೆತನದ ಮಹತ್ವದ ಬಗ್ಗೆ ಅನಾದಿ ಕಾಲದಿಂದಲೂ ಎಲ್ಲರಿಗೂ ತಿಳಿದಿದೆ. ಸಾವಿಲ್ಲದ ಗೆಳೆತನ ಗಳಿಸುವುದು ತುಂಬಾ ಕಷ್ಠ-ಸುಖದಲ್ಲಿರುವಾಗ ಬರುವ ನೂರು ಗೆಳೆಯರಿಗಿಂತ ದುಃಖದಲ್ಲಿ ಇರುವಾಗ ಬರುವ ಒಂದು ಗೆಳೆತನ ಸಿಕ್ಕರೆ ನಾವು ಎಷ್ಠು ಪುಣ್ಯವಂತರಲ್ವಾ..???
✍ ಗ್ರೀಷ್ಮಾ ಭಂಡಾರಿ ಕಲ್ಲಡ್ಕ