January 19, 2025
prashanth-mamaath-5
ಉಡುಪಿ ತಾಲೂಕು ಬ್ರಹ್ಮಾವರ ಹಂದಾಡಿ ಶ್ರೀಮತಿ ವನಜ ಕುಶಲ ಭಂಡಾರಿ ಮತ್ತು ಶ್ರೀ ಕುಶಲ ಭಂಡಾರಿ ಅಚ್ಲಾಡಿ ದಂಪತಿಯ ಪುತ್ರ 
ಚಿ॥ಪ್ರಶಾಂತ 
ಹಾಗೂ ಉಡುಪಿ ತಾಲೂಕು ಉದ್ಯಾವರದ ಶ್ರೀಮತಿ ವಿಮಲ ಚಂದ್ರಶೇಖರ ಭಂಡಾರಿ ಮತ್ತು ಶ್ರೀ ಚಂದ್ರಶೇಖರ್ ಭಂಡಾರಿ ದಂಪತಿಯ ಪುತ್ರಿ 
ಚಿ॥ಸೌ॥ಮಮತ 
ರವರ ವಿವಾಹವು ಏಪ್ರಿಲ್‌ 19 ರ ಗುರುವಾರ ಉದ್ಯಾವರದ ಶ್ರೀ ವಿಠೋಭ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಗುರುಹಿರಿಯರು,ಬಂದುಮಿತ್ರರು ಹಾಗೂ ಕುಟುಂಬಸ್ಥರ  ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಈ ಶುಭ ಸಮಾರಂಭಕ್ಕೆ  ಆಗಮಿಸಿದ ಬಂಧುಗಳು,ಅತಿಥಿಗಳು ಹಾಗೂ   ಹಿತೈಷಿಗಳು ನವ ವಧುವರರನ್ನು ಹಾರೈಸಿ ಆಶೀರ್ವದಿಸಿದರು. ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ  ಸುಮಧುರವಾಗಿರಲಿ.ನಿಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸಲು ಭಗವಂತನ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ  ಹಾರೈಸುತ್ತಾ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

— ಭಂಡಾರಿವಾರ್ತೆ.

1 thought on “ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಾವರದ ಚಿ॥ಪ್ರಶಾಂತ ಮತ್ತು ಉಡುಪಿಯ ಉದ್ಯಾವರದ ಚಿ॥ಸೌ॥ ಮಮತ

Leave a Reply

Your email address will not be published. Required fields are marked *