January 18, 2025
marriage-Vikram FEATURE
ಉಡುಪಿ ಕೊರಂಗ್ರಪಾಡಿ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸಬಿತ ಬಾಲಕೃಷ್ಣ ಭಂಡಾರಿ ದಂಪತಿಗಳ ಪುತ್ರ
ಚಿ ॥ವಿಕ್ರಮ್ 
ಮತ್ತು ಮಂಗಳೂರು ಬೋಂದೆಲ್ ಕೆ.ಎಚ್.ಬಿ. ಕಾಲೋನಿಯ ಶ್ರೀ ಅಶೋಕ್.ಜಿ. ಮತ್ತು ಶ್ರೀಮತಿ  ಕಿರಣ್ಮಯಿ ಅಶೋಕ್ ದಂಪತಿಗಳ ಪುತ್ರಿ
ಚಿ||ಸೌ||ಪ್ರಿಯಾಂಕಾ 
ಇವರ ವಿವಾಹ ನಿಶ್ಚಿತಾರ್ಥವು ಮಾರ್ಚ್ 30 ರ ಶುಕ್ರವಾರ ಮಂಗಳೂರು ಬೋಂದೆಲ್ ನ ಕೆ.ಎಚ್.ಬಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು.
ಶ್ರೀಯುತ ವಿಕ್ರಮ್ ಬಾಲಕೃಷ್ಣ ರವರು ಕುವೈತ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು, ಕುಮಾರಿ ಪ್ರಿಯಾಂಕಾ ಅಶೋಕ್ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಶುಭ ಸಮಾರಂಭದಲ್ಲಿ ಭಂಡಾರಿ ಸಮಾಜದ ಹಿರಿಯರು, ಕಿರಿಯರು, ಕುಟುಂಬಸ್ಥರು ಹಾಗೂ ಬಂದು ಮಿತ್ರರು  ಉಪಸ್ಥಿತರಿದ್ದು ನಿಶ್ಚಿತಾರ್ಥದ ಮೂಲಕ ಬೆಸೆದ ಜೋಡಿಹಕ್ಕಿಗಳಿಗೆ ಶುಭ ಹಾರೈಸಿ ಹರಸಿದರು.
ನವ ಜೋಡಿಗಳು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಶಾಂತಿ ನೆಮ್ಮದಿಯುತ ಜೀವನ ನಡೆಸುವಂತೆ ಭಗವಂತನು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತಾ, ವಿವಾಹ ನಿಶ್ಚಿತಾರ್ಥದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *