
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಶ್ರೀನಿವಾಸ್ ಭಂಡಾರಿ ಮತ್ತು ಶ್ರೀಮತಿ ಗೀತಾ ಶ್ರೀನಿವಾಸ್ ಭಂಡಾರಿ ದಂಪತಿಗಳ ಪುತ್ರಿ ಕುಮಾರಿ ಪ್ರತಿಭಾ ಶ್ರೀನಿವಾಸ್ ಭಂಡಾರಿಯವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ದಿವಂಗತ ಜಗದೀಶ್ ಭಂಡಾರಿ ಮತ್ತು ಸುಧಾ ಜಗದೀಶ್ ಭಂಡಾರಿ ದಂಪತಿಗಳ ಪುತ್ರ ಶ್ರೀ ವಿಜೇತ್ ಭಂಡಾರಿಯವರೊಂದಿಗೆ ಏಪ್ರಿಲ್ 5 ರ ಗುರುವಾರ ಹರಿಹರಪುರ ಅಭಿರಾಮನಗರದ ವಧುವಿನ ಸ್ವಗೃಹದಲ್ಲಿ ನೆರೆದಿದ್ದ ಗುರು ಹಿರಿಯರ, ಬಂಧು ಬಾಂಧವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಶುಭ ಸಂದರ್ಭದಲ್ಲಿ ನೆರೆದಿದ್ದ ಕುಟುಂಬಸ್ಥರು, ನೆರೆಹೊರೆಯವರು, ಆತ್ಮೀ ಯರು ಉಂಗುರ ವಿನಿಮಯದೊಂದಿಗೆ ವಿವಾಹ ನಿಶ್ಚಿತಾರ್ಥ ಬಂಧನಕ್ಕೊಳಗಾದ ನವಜೋಡಿಗೆ ಶುಭ ಹಾರೈಸಿ ಹರಸಿದರು.
ಭಂಡಾರಿ ಸಮಾಜದ ಸ್ಪುರದ್ರೂಪಿ ಯುವಕ ವಿಜೇತ್ ಮತ್ತು ಭಂಡಾರಿ ಕುಟುಂಬದ ಅಪರೂಪದ ಕವಿಯತ್ರಿ, ಪಾಕಪ್ರವೀಣೆ ಪ್ರತಿಭಾ ಎಂಬ ಅನುರೂಪದ ಜೋಡಿಗೆ ವಿವಾಹ ನಿಶ್ಚಿತಾರ್ಥದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಜೋಡಿಹಕ್ಕಿಗಳು ಆದಷ್ಟು ಬೇಗ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.