
ಬಂಟ್ವಾಳ ತಾಲೂಕು ಉಳಿಗ್ರಾಮದ ಕಕ್ಕೆಪದವು ಶ್ರೀ ಮೋಹನರಾಜ್ ಭಂಡಾರಿ ಮತ್ತು ಶ್ರೀಮತಿ ದಮಯಂತಿ ಮೋಹನರಾಜ್ ದಂಪತಿಯ ಪುತ್ರ ರಾದ
ಮಾ॥ ಅಮೋಘ ಮತ್ತು ಮಾ॥ ಅನಘ ಸಹೋದರರು ಗಣಿತ ಪ್ರತಿಭಾ ಪರೀಕ್ಷೆ ಯಲ್ಲಿ ಕ್ರಮವಾಗಿ ಶಾಲೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಹೋದರರ ಸಾಧನೆಗೆ ಅನೇಕ ಬಂಧುಗಳ, ಗುರುಗಳ ಮತ್ತು ಗಣ್ಯರ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 



ಈ ಸಹೋದರರು ವಿದ್ಯಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾತೆ೯ ಶುಭ ಹಾರೈಸುತ್ತದೆ.
–ಭಂಡಾರಿವಾತೆ೯