
ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ಗಣೇಶ್ ಭಂಡಾರಿ ಮತ್ತು ರಜನಿ ಗಣೇಶ್ ರ ಪ್ರಥಮ ಪುತ್ರ
ಮಾ|| ಸಾಕ್ಷಾತ್
ನ ಹತ್ತನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು,ಬಂಧುಗಳು ಮನೆಯ ಹಿರಿಯರು ಊರ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾ. ಸಾಕ್ಷಾತ್ ಗೆ ಶುಭಕೋರಿದರು.




ಕಾರ್ಯಕ್ರಮದ ಅಂಗವಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು, ಹಲವಾರು ಕಲಾವಿದರು ಭಾಗವಹಿಸಿ ರಂಜಿಸಿದರು ಹಾಗೆಯೇ ಕುಂದಾಪುರ ಚಿನ್ನದ ಹುಡುಗಿ ಖ್ಯಾತಿಯ ಯೋಗ ನೃತ್ಯ ಪಟು ಕುಮಾರಿ. ಧನ್ವಿ ಪೂಜಾರಿ ಭಾಗವಹಿಸಿ ಸಂಭ್ರಮಕ್ಕೆ ಮೆರಗು ತಂದರು.



ಮಾಸ್ಟರ್. ಸಾಕ್ಷಾತ್ ನ ಭವಿಷ್ಯ ಉಜ್ವಲವಾಗಿರಲಿ ಎಂದು ,ಶಿರೂರು ಭಂಡಾರಿ ಕುಟುಂಬಸ್ಥರು ಹಾಗೂ ತಗ್ಗುಂಜೆ, ಹೊಸಮಠ ಕುಟುಂಬದವರು ಹಾರೈಸಿದ್ದಾರೆ.
10ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಾ. ಸಾಕ್ಷಾತ್ ರವರಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ದೇವರು ಆಯುರಾರೋಗ್ಯ ಐಶ್ಚರ್ಯ ವಿಧ್ಯೆ ಬುದ್ದಿಯನ್ನು ಅನುಗ್ರಹಿಸಲಿ ಎಂದು ಹಾರೈಸುತ್ತದೆ.
ವರದಿ- ವೆಂಕಟೇಶ್ ಭಂಡಾರಿ ಕುಂದಾಪುರ.