January 18, 2025
trophy-edited-for-web

ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ ವಲಯದ ವತಿಯಿಂದ ವಿಶೇಷವಾಗಿ ವಿವಿಧ ಸೇವಾ ಉದ್ದೇಶ ಮತ್ತು ವಿದ್ಯಾನಿಧಿ ಸಂಗ್ರಹಿಸುವ ಸದುದ್ದೇಶದೊಂದಿಗೆ,

MBS ಟ್ರೋಪಿ 2018 – ಅಂಡರ್ ಆರ್ಮ್ ನಿಗದಿತ ಒವರ್ ಗಳ ಕ್ರಿಕೆಟ್ ಟೂರ್ನಮೆಂಟ್  

ನ್ನು ಹಮ್ಮಿಕೊಂಡು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡುತ್ತಿದ್ದೇವೆ.

ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ದಿನಾಂಕ 10 ನೇ ಮಾರ್ಚ್ 2018 ರ ಶನಿವಾರ ಮತ್ತು 11ನೇ ಮಾರ್ಚ್ 2018 ರ ರವಿವಾರ ಕ್ರಿಕೆಟ್ ಪಂದ್ಯಾಟ ನಡೆಯಲಿರುವುದು. ಪಂದ್ಯಾಟವು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಹೊಂದಿದ್ದು, ಜೊತೆಗೆ ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ, ಉತ್ತಮ ಎಸೆತಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಆಸಕ್ತ ತಂಡಗಳು ಮುಂಗಡ ಶುಲ್ಕದೊಂದಿಗೆ ದಿನಾಂಕ 7ನೇ ಮಾರ್ಚ್ 2018 ರ ಒಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9964397446, 9845163432, 9880415135, 9008818696.

 

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.
ಸರ್ವರಿಗೂ ಸ್ವಾಗತ ಬಯಸುತ್ತಿದ್ದೇವೆ.                                              

-ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ

 

ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಭಂಡಾರಿಯವರು ಭಂಡಾರಿವಾರ್ತೆಯೊಂದಿಗೆ ಮಾತನಾಡಿ “ವಿದ್ಯಾನಿಧಿ ಮತ್ತು ವಿವಿಧ ಸೇವಾ ಚಟುವಟಿಕೆಗಳಿಗೆ ಹಣ ಸಂಗ್ರಹದ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕ್ರೀಡಾಕೂಟಕ್ಕೆ ಬಂಧುಗಳು ತಮ್ಮ ತನು ಮನ ಧನ ಸಹಕಾರ ನೀಡಬೇಕು” ಎಂದು ವಿನಂತಿಸಿಕೊಂಡರು.

-ಭಂಡಾರಿವಾರ್ತೆ

 

 

Leave a Reply

Your email address will not be published. Required fields are marked *