
ಶ್ರೀ ನವೀನ್ ಭಂಡಾರಿ ಮೂಡಂಬೈಲ್ ಮತ್ತು ಶ್ರೀಮತಿ ಸರಿತಾ ನವೀನ್ ಭಂಡಾರಿಯವರ ಮಾಲೀಕತ್ವದ “ಮೇದಿನಿ ಜನಸೇವಾ ಕೇಂದ್ರ ಮತ್ತು ಮೇದಿನಿ ಲ್ಯಾಂಡ್ ಲಿಂಕ್ಸ್.” ಪುತ್ತೂರಿನ ತಾಲ್ಲೂಕು ಕಛೇರಿ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾದ ಎದುರುಗಡೆ ಇರುವ ನಗರಸಭಾ ಕಟ್ಟಡದಲ್ಲಿ ತನ್ನ ಸೇವೆಯನ್ನು ಆರಂಭಿಸಿತು.
ಸಾರ್ವಜನಿಕರಿಗೆ ಅತ್ಯಗತ್ಯ ಹಲವಾರು ಸೇವೆಗಳು ಈ ಕೇಂದ್ರದಲ್ಲಿ ಲಭಿಸಲಿವೆ.ಹೊಸ ಆಧಾರ್ ಕಾರ್ಡ್, ಆಧಾರ್ ತಿದ್ದುಪಡಿ, ಆಧಾರ್ ಡೌನ್‌ಲೋಡ್, ಆಧಾರ್ ಸ್ಮಾರ್ಟ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್,ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳ ಆನ್ ಲೈನ್ ಅರ್ಜಿಗಳು, ವಾಹನದ ಆರ್.ಸಿ,ಡ್ರೈವಿಂಗ್ ಲೈಸೆನ್ಸ್,ಕಲರ್ ಜೆರಾಕ್ಸ್, ಜೀವನ್ ಪ್ರಮಾಣ ಪತ್ರ…ಹೀಗೆ ಹತ್ತು ಹಲವಾರು ಜನಸ್ನೇಹಿ ಸೌಲಭ್ಯಗಳು ಒಂದೇ ಸೂರಿನಡಿ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿವೆ.
ಜನರಿಗಾಗಿ ಆರಂಭಿಸಿರುವ “ಮೇದಿನಿ ಜನಸೇವಾ ಕೇಂದ್ರ ಮತ್ತು ಮೇದಿನಿ ಲ್ಯಾಂಡ್ ಲಿಂಕ್ಸ್” ಆದಷ್ಟು ಬೇಗ ಜನರ ಪ್ರೀತಿ ವಿಶ್ವಾಸ ಗಳಿಸಲಿ.ಜನರ ಸಹಕಾರದಿಂದ ಮನೆಮನೆಮಾತಾಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.