
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಬೈರಾಪುರದ ಶ್ರೀ ಮಂಜಪ್ಪ ಭಂಡಾರಿ ಮತ್ತು ಶ್ರೀಮತಿ ಗಾಯತ್ರಿಯವರ ಪುತ್ರಿ. ಮೇಘನಾ ಭಂಡಾರಿ ಇವರು 2018-19 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 535 (89.16%) ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು G.P.U ಕಾಲೇಜು ರಿಪ್ಪನ್ ಪೇಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಇವರ ಈ ಉನ್ನತ ಸಾಧನೆಯೊಂದಿಗೆ ಊರಿನ , ಗುರುಹಿರಿಯರ, ಪೋಷಕರ ಮತ್ತು ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದ್ದು , ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಕು. ಮೇಘನಾ ಳ ಸಾಧನೆಯನ್ನು ಶ್ಲಾಘಿಸುತ್ತದೆ, ಜೊತೆಗೆ ಇವರ ಮುಂದಿನ ಭವಿಷ್ಯ ಮತ್ತು ಉನ್ನತ ಶಿಕ್ಷಣ ಉಜ್ವಲವಾಗಿರಲಿ ಎಂದು ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ