January 19, 2025
6

ಮಳೆಗಾಲದಲ್ಲಿ ಗಂಡಸರ ಜೊತೆ ಹೆಂಗಸರು ಕೂಡ ನುಗ್ಗೆಕಾಯಿ ತಿನ್ನಬೇಕಂತೆ!

ನುಗ್ಗೆಕಾಯಿ ಕೇವಲದ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡಲು ಮಾತ್ರವಲ್ಲ, ಈ ತರಕಾರಿಯಲ್ಲಿ ಇನ್ನೂ ಹಲವು ರೀತಿಯ ಆರೋಗ್ಯ ಪ್ರಯೋಜನ ಗಳು ಅಡಗಿದೆ ಎಂದರೆ, ನೀವು ನಂಬಲೇಬೇಕು.

ಊಟ ಮಾಡಲು ಕೂತಾಗ ಸಾಂಬಾರಿನಲ್ಲಿ ನುಗ್ಗೆಕಾಯಿಯ ತುಂಡು ಕಂಡಾಕ್ಷಣ ಹೆಚ್ಚಿನವರು ಮುಖ ಗಂಟಿಕ್ಕಿಕೊಳ್ಳುತ್ತಾರೆ! ಕಾರಣ ಇಷ್ಟೇ ಈ ತರಕಾರಿಯ ಬಗ್ಗೆ ಹೆಚ್ಚಿನವರಿಗೆ ಇರುವ ಅಸಡ್ಡೆ, ಹಾಗೂ ಈ ತರಕಾರಿಯ ಬಗ್ಗೆ ಹೆಚ್ಚಿನವರಿಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ, ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆಗೆ ಸಿಕ್ಕರೂ ಕೂಡ ಈ ತರಕಾರಿಯನ್ನು ಬಿಟ್ಟುಬರುತ್ತಾರೆ.

ಆದರೆ ನಿಮಗೆ ಗೊತ್ತಿರಲಿ, ಈ ತರಕಾರಿ ಯಲ್ಲಿ ಕಂಡು ಬರುವ ಪೌಷ್ಟಿಕಸತ್ವಗಳು ಹಾಗೂ ವಿಟಮಿನ್ ಸಿ ಅಂಶ, ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿಯಂತ್ರಿಸುವುದರ ಜೊತೆಗೆ ಶೀತ, ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಈ ನುಗ್ಗೆಕಾಯಿಯಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ…

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ

  • ಸಾಮಾನ್ಯವಾಗಿ ಮಧುಮೇಹ ಇರುವ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತಿರು ವುದರಿಂದ, ಈ ಕಾಯಿಲೆ ಅಷ್ಟು ಸುಲಭವಾಗಿ ನಿಯಂತ್ರಣಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ, ಕಿಡ್ನಿಗಳಿಗೂ ಕೂಡ ಸಮಸ್ಯೆ ಕಂಡು ಬರುವ ಅಪಾಯ ಹೆಚ್ಚಿರುತ್ತದೆ.
  • ಹೀಗಾಗಿ ಈ ಸಮಸ್ಯೆ ಹೆಚ್ಚಾಗದಂತೆ, ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ, ತಮ್ಮ ಆಹಾರ ಪದ್ಧತಿಯಲ್ಲಿ ನುಗ್ಗೆಕಾಯಿಗಳನ್ನು ಸೇರಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಉದಾಹರಣೆಗೆ ದಾಲ್ ಜೊತೆ ನುಗ್ಗೆಕಾಯಿ, ಇಲ್ಲಾಂದರೆ ತರಕಾರಿ ಸಾಂಬರ್ ಮಾಡಿದರೆ ಇದಕ್ಕೆ ನುಗ್ಗೆಕಾಯಿಯನ್ನು ಕೂಡ ಸೇರಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆ ಆಗದಂತೆ ತಡೆಯುವುದು, ಮಾತ್ರವ ಲ್ಲದೆ ಕಿಡ್ನಿಗಳಲ್ಲಿ ಸಮಸ್ಯೆ ಉಂಟಾಗದಂತೆ ತಡೆಯುವುದು.

ಮೂಳೆಗಳನ್ನು ಬಲಪಡಿಸುವುದು

ನುಗ್ಗೆಕಾಯಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವು ದರಿಂದ, ದೇಹದ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ವಯಸ್ಸಾದವರಲ್ಲಿ ಕಂಡು ಬರುವ ಅಸ್ಥಿರಂಧ್ರತೆ ಹಾಗೂ ಸಂಧಿವಾತ, ಗಂಟು ನೋವಿನಂತಹ ಸಮಸ್ಯೆಯನ್ನು ಕೂಡೆ ದೂರ ಮಾಡುತ್ತದೆ.

ಜೀರ್ಣಶಕ್ತಿ ಹೆಚ್ಚಾಗುತ್ತದೆ…

ನುಗ್ಗೆಕಾಯಿಯಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು ಪೌಷ್ಟಿಕ ಸತ್ವಗಳು, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹೆಚ್ಚು ಮಾಡು ವುದು ಮಾತ್ರವಲ್ಲದೆ, ಅಜೀರ್ಣ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ. ಹೀಗಾಗಿ ನುಗ್ಗೆಕಾಯಿ ಸಾಂಬರ್ ಅಥವಾ ನುಗ್ಗೆಕಾಯಿ ಸೊಪ್ಪನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ಶೀತ ಕೆಮ್ಮು ಜ್ವರದಂತಹ ಸಮಸ್ಯೆಗಳಿಗೆ…

  • ಇನ್ನು ಈ ಮೊದಲೇ ಹೇಳಿದ ಹಾಗೆ, ಈ ತರಕಾರಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಮಳೆಗಾಲದ ಸಮಯದಲ್ಲಿ ವಾತಾವರಣದಲ್ಲಿ ಏರುಪೇರು ಉಂಟಾದಾಗ ಕಾಡು ವಂತಹ ಶೀತ, ಕೆಮ್ಮು, ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆ ನಿವಾರಣೆ ಮಾಡುವುದು ಮಾತ್ರವಲ್ಲದೆ, ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡಲು ನೆರವಾಗುತ್ತದೆ.
  • ಅಷ್ಟೇ ಅಲ್ಲದೆ ವಾರಕ್ಕೆ ಒಮ್ಮೆಯಾರೂ ಸಾಂಬರ್‌ನಲ್ಲಿ ಬಳಸಿ ಸೇವನೆ ಮಾಡುತ್ತಾ ಬಂದರೆ, ಅಸ್ತಮಾ, ಉಬ್ಬರ ಮತ್ತು ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುತ್ತದೆ.

ಮಧುಮೇಹ ರೋಗಿಗಳು

  • ನುಗ್ಗೆಕಾಯಿ ಮತ್ತು ಇದರ ಸೊಪ್ಪಿನಲ್ಲಿ ಸಕ್ಕರೆಯ ಅಂಶ ಕಡಿಮೆ ಇರುವುದರ ಜೊತೆಗೆ ವಿಟಮಿನ್ನು ಗಳು ಮತ್ತು ಖನಿಜಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಮಧುಮೇಹ ರೋಗಿಗಳಿಗೆ ಹೇಳಿ ಮಾಡಿಸಿದ ತರಕಾರಿ, ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ನುಗ್ಗೆಕಾಯಿ ಹಾಗೂ ಇದರ ಸೊಪ್ಪನ್ನು ಹೆಚ್ಚು ಹೆಚ್ಚಾಗಿ ಸೇವಿಸುವಂತೆ ತಜ್ಞರು ಕೂಡ ಸಲಹೆ ಮಾಡುತ್ತಾರೆ.

ವಿಟಮಿನ್ ಬಿ ಹಾಗೂ ವಿಟಮಿನ್ ಎ

  • ನುಗ್ಗೆಕಾಯಿಯಲ್ಲಿ ವಿಟಮಿನ್ ಬಿ ಸಮೃದ್ಧವಾಗಿ ಕಂಡು ಬರುವುದರಿಂದ, ತ್ವಚೆಯ ಹಾಗೂ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಅಷ್ಟೇ ಅಲ್ಲದೆ ಈ ತರಕಾರಿಯಲ್ಲಿ ಕ್ಯಾರೆಟ್ ನಲ್ಲಿ ಸಿಗುವಂತಹ ವಿಟಮಿನ್ ಎ ಕೂಡ ಸಮೃದ್ಧವಾಗಿ ರುವುದರಿಂದ ಕಣ್ಣಿನ ಆರೋಗ್ಯ ಕಾಪಾಡುವುದು ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *