September 20, 2024

2017 -18 ರ ಸಾಲಿನ SSLC ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕು. ಭೂಮಿಕಾ ಡಿ. ಬಿ ಇವರು 524 (ಶೇ.83.84 ) ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಳ್ತಂಗಡಿ ಪಡ್ಲಾಡಿಯ ಶ್ರೀ ದಯಾನಂದ ಭಂಡಾರಿ ಮತ್ತು ಶ್ರೀಮತಿ ಶೋಭಾ ಭಂಡಾರಿ ದಂಪತಿಗಳ ಸುಪುತ್ರಿ. ಇವರು ಬೆಳ್ತಂಗಡಿ ಲಾಯಿಲ ದ ಸಂತ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಶುಭ ಸಂದರ್ಭದಲ್ಲಿ ತಂದೆ -ತಾಯಿ ಮತ್ತು ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಕು.ಭೂಮಿಕಾ ಡಿ ಬಿ ಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ. 

ಭಂಡಾರಿ ಕುಟುಂಬ ದ ಪ್ರತಿಭೆ ಕು. ಭೂಮಿಕಾ ಡಿ ಬಿ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ ಭಂಡಾರಿ ವಾರ್ತೆ ಬೇಡುತ್ತದೆ

Leave a Reply

Your email address will not be published. Required fields are marked *