September 20, 2024

ಮೂಡಬಿದ್ರೆ ಉಳಿಯ ದ ಶ್ರೀಮತಿ ಲೀಲಾವತಿ ಭಂಡಾರಿ ಮತ್ತು ಶ್ರೀ ಸುಕುಮಾರ್ ಭಂಡಾರಿ ದಂಪತಿಯ ಸುಪುತ್ರಿ ಕುಮಾರಿ ಧನ್ಯಾ ಭಂಡಾರಿ ಮಂಗಳೂರಿನ ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ ಹಾಗೂ ಈ ಹಿಂದೆ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಇವರು ಮೂಡಬಿದ್ರೆಯ ಜೈನ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿ ಯು ಸಿ ವಿದ್ಯಾರ್ಥಿನಿಯಾಗಿದ್ದಾರೆ .

ಕುಮಾರಿ ಧನ್ಯಾ ರವರ ಕ್ರೀಢಾ ಭವಿಷ್ಯ ಉಜ್ವಲವಾಗಲಿ , ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಭಂಡಾರಿ ವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ:ವ್ಯಾಸ್ ಭಂಡಾರಿ ಮೂಡಬಿದ್ರಿ

Leave a Reply

Your email address will not be published. Required fields are marked *