January 18, 2025
Nidhi BN PSI

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಬಂಡಸಾಲೆ ಮನೆ ನಿವಾಸಿ ನಾರಾಯಣ ಭಂಡಾರಿ ರವರ ಮಗಳಾದ ಕು. ನಿಧಿ. ಬಿ.ಎನ್‌ ರವರು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಿರುತ್ತಾರೆ.

 

ಈ ಹಿನ್ನಲೆಯಲ್ಲಿ ದಿನಾಂಕ 07/11/2020 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸನ್ಮಾನಿಸಲಾಯಿತು.

 

ಈ ಸನ್ಮಾನ ಕಾಯಕ್ರಮದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ವೆಲೆಂಟೈನ್‌ ಡಿʻಸೋಜಾ ರವರು, ಬಂಟ್ವಾಳ ವೃತ್ತ ನಿರೀಕ್ಷಕರಾದ ಶ್ರೀ ಟಿ.ಡಿ ನಾಗರಾಜ್‌ ರವರು, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಶ್ರೀ ಪ್ರಸನ್ನ. ಎಂ.ಎಸ್‌ ರವರು ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಭಂಡಾರಿ ಕುಟುಂಬದ ಹೆಣ್ಣು ಮಗಳೊಬ್ಬರು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ  ನೇರ ನೇಮಕಾತಿಯಲ್ಲಿ PSI ಆಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದ್ದು ಭಂಡಾರಿ ವಾರ್ತೆ ಕು. ನಿಧಿ ಮತ್ತು ಪೋಷಕರನ್ನು ಅಭಿನಂಧಿಸುತ್ತದೆ ಮತ್ತು ಇವರ ಮುಂದಿನ ವೃತ್ತಿ ಜೀವನ ಮತ್ತು ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತದೆ.

-Bhandary Varthe

 

1 thought on “ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಪಿ.ಎಸ್.ಐ ಆಯ್ಕೆಯಾದ ಬಂಟ್ವಾಳದ ಕು. ನಿಧಿ ಬಿ. ಎನ್

Leave a Reply

Your email address will not be published. Required fields are marked *