ಮಧ್ಯಪ್ರದೇಶದ ಜುಬಲ್ ಪುರಂ ನಲ್ಲಿ ಡಿಸೆಂಬರ್1 ರಿಂದ 6 ರ ವರೆಗೆ ನಡೆದ ರಾಷ್ಟ್ರಮಟ್ಟದ (SGFI) ಕರಾಟೆ ಸ್ಪರ್ಧೆಯಲ್ಲಿ ಕು. ಪ್ರೀತಿ ಎಮ್ .ಎಲ್. ಇವರು ತೃತೀಯ ಸ್ಥಾನ ದೊಂದಿಗೆ ಕಂಚಿನ ಪದಕ ವನ್ನು ಪಡೆದಿದ್ದಾರೆ ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಗೆ ನಮ್ಮ ರಾಜ್ಯಕ್ಕೆ ಹಾಗೂ ಭಂಡಾರಿ ಸಮಾಜಕ್ಕೆ ಕೀರ್ತಿ ತಂದಿರುತ್ತಾರೆ.
ಇವರು 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 591 (94.56%) ಅಂಕ ಗಳಿಸಿ ವಿದ್ಯಾರ್ಜನೆಯಲ್ಲಿಯೂ ಸಾಧನೆ ತೋರಿದ್ದರು.
ಕು. ಪ್ರೀತಿ ಎಮ್ .ಎಲ್ . ಶ್ರೀ ನಿತಿನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಕು. ಪ್ರೀತಿ ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಯಾಗಿರುತ್ತಾರೆ.
ಪ್ರಸ್ತುತ ಸುರತ್ಕಲ್ ನಲ್ಲಿ ವಾಸಿಸುತ್ತಿರುವ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಸಂತೋಷ್ ಭಂಡಾರಿ ದಂಪತಿಯ ಪುತ್ರಿ ಕರಾಟೆಯಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ