ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್ ನವರು ಉಡುಪಿಯ ಸಿಲಾಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನವೆಂಬರ್ 18,2018 ರಂದು ಆಯೋಜಿಸಿದ್ದ ವಲಯ ಶಾಲಾ ಮಟ್ಟದ ಕರಾಟೆ ಚಾಂಪಿಯನ್ ಷಿಪ್-2018 ರಲ್ಲಿ ಬಾಲಕಿಯರ ಇಪ್ಪತ್ತೈದರಿಂದ ಮೂವತ್ತೈದು ಕೆಜಿ ವಿಭಾಗದ ವೈಟ್ ಬೆಲ್ಟ್ ಕೆಟಗರಿಯಲ್ಲಿ ನಡೆದ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ
“ಶ್ರೇಷ್ಠ ಸಂತೋಷ್”
ಭಾಗವಹಿಸಿ, ಪ್ರಥಮ ಸ್ಥಾನ ಗಳಿಸುವುದರೊಂದಿಗೆ 2019 ರ ಜನವರಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಷಿಪ್ ಗೆ ಆಯ್ಕೆಯಾಗಿದ್ದಾರೆ.
ಸಿಲಾಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಶ್ರೇಷ್ಠ ಸಂತೋಷ್ ಅವರು ಉಡುಪಿಯ ಅಲೆವೂರಿನ ಸಂತೋಷ್ ಭಂಡಾರಿ ಮತ್ತು ತೇಜಸ್ವಿನಿ ಸಂತೋಷ್ ಭಂಡಾರಿ ದಂಪತಿಯ ಪುತ್ರಿ. ಸಿಲಾಸ್ ರಾಜಶೇಖರ್ ಇವರ ಕರಾಟೆ ತರಬೇತುದಾರರಾಗಿದ್ದಾರೆ.
ಶ್ರೇಷ್ಠ ಸಂತೋಷ್ ಅವರು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಗಮನ ಸೆಳೆಯುವ ಸಾಧನೆ ಮಾಡಲಿ ಮತ್ತು ಕರಾಟೆ ಕ್ರೀಡೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಲು ಶ್ರೀ ದೇವರು ಅವರಿಗೆ ಆಯುರಾರೋಗ್ಯ ವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಹಾರೈಸುತ್ತದೆ.
“ಭಂಡಾರಿವಾರ್ತೆ. “
Super nice news….