
ಕುಂದಾಪುರ ಕೋಣಿಯ ಶ್ರೀ ಸ್ಕಂದ ಮನೆಯ ಶ್ರೀ ಈಶ್ವರ ಭಂಡಾರಿ ಮತ್ತು ವಾಣಿ ಭಂಡಾರಿಯವರ ಸುಪುತ್ರ ಮಿಥಿಲೇಶ್ ಇವರು 2018-19 ರ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 544 (90.66%) ಅಂಕ ಗಳಿಸುವುದರೊಂದಿಗೆ ಅಮೋಘ ಸಾಧನೆಗೈದಿದ್ದಾರೆ. ಇವರ ಈ ಸಾಧನೆ ಗುರುಹಿರಿಯರ , ಊರಿನ ಮತ್ತು ಹೆತ್ತವರ ಕೀರ್ತಿಯನ್ನು ಹೆಚ್ಚಿಸಿದೆ. ಇವರು ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ.

ಇವರ ಈ ಸಾಧನೆಯು ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು , ಭಂಡಾರಿವಾರ್ತೆ ಇವರ ಸಾಧನೆಯನ್ನು ಶ್ಲಾಘಿಸುತ್ತದೆ. ಮಿಥಿಲೇಶ್ ರವರ ಮುಂದಿನ ವಿದ್ಯಾಬ್ಯಾಸ ಮತ್ತು ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.