January 18, 2025
WhatsApp Image 2022-05-16 at 5.25.53 PM

ಭಂಡಾರಿ ಕುಟುಂಬದ ತರವಾಡು ಬ್ರಹ್ಮರಮಜಲು ಶ್ರೀ ನಾಗ ಕ್ಷೇತ್ರ ಬಂಟ್ವಾಳ ತಾಲ್ಲೂಕು ಮಂಚಿ ಗ್ರಾಮದ ಮಿತ್ತಗುತ್ತುನಲ್ಲಿ ಪ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಮೇ 27 ನೇ ಶುಕ್ರವಾರದಂದು ನಡೆಯಲಿದೆ.

ಹಿಂದೆ ಮೇ 20 ನೇ ಶುಕ್ರವಾರ ಎಂಬುದಾಗಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ದಿನ ನಿಗದಿ ಮಾಡಲಾಗಿತ್ತು. ಕುಟುಂಬದಲ್ಲಿ ಅಂದಿನ ದಿನಕ್ಕೆ ಸೂತಕ ನಡೆದುದರಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಸಾಧ್ಯವಾಗದ ಕಾರಣ ಮೇ 27 ನೇ ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ ಅವರು ಭಂಡಾರಿ ವಾರ್ತೆಯ ಮುಖೇನ ಕುಟುಂಬಸ್ಥರಲ್ಲಿ ಮತ್ತು ಭಂಡಾರಿ ಸಮಾಜ ಬಂಧುಗಳಲ್ಲಿ ಹಾಗೂ ಊರಿನ ಹತ್ತು ಸಮಸ್ತರಲ್ಲಿ ವಿನಂತಿಸಿ ಸಾನ್ನಿಧ್ಯಗಳ ಪ್ರತಿಷ್ಠೆ , ಪ್ರತಿಷ್ಠಾಬಂಧ ಬ್ರಹ್ಮ ಕಲಶಾಭಿಷೇಕ , ತಂಬಿಲ ಬಲಿ, ಆಶ್ಲೇಷ ಬಲಿ ಸೇವೆಗೆ ತಮ್ಮೆಲ್ಲರನ್ನು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಮುಖಾಂತರ ಆಮಂತ್ರಿಸಿದ್ದಾರೆ.

Leave a Reply

Your email address will not be published. Required fields are marked *