January 18, 2025
Pushpak-Featues

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಬಸ್ಸು ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಏಪ್ರಿಲ್ 2 ರ ಸೋಮವಾರ ಶ್ರೀ ಪ್ರಭಾಕರ ಭಂಡಾರಿಯವರು ತಮ್ಮ ಮಾಡರ್ನ್ ಪುಷ್ಪಕ್ ಮೆನ್ಸ್ ಪಾರ್ಲರ್ ನೂತನ ಸಲೂನ್ ನ ಪ್ರಾರಂಭೋತ್ಸವವನ್ನು ಶ್ರೀ ಮಹಾಲಕ್ಷ್ಮಿ ಪೂಜೆ ಮತ್ತು ಶ್ರೀ ಗಣಪತಿ ಹೋಮದೊಂದಿಗೆ ವಿಜೃಂಭಣೆಯಿಂದ ನೆರವೇರಿಸಿದರು.


ಶಿರಾಳಕೊಪ್ಪದಲ್ಲಿ ಪುಷ್ಪಕ್ ಬ್ರದರ್ಸ್ ಎಂದು ಹೆಸರಾಗಿರುವ ಸಹೋದರರ ಮೂರನೇ ಆಧುನಿಕ ಕೇಶಕರ್ತನ ಮತ್ತು ಸುಸಜ್ಜಿತ ಮೆನ್ಸ್ ಪಾರ್ಲರ್ ಇದಾಗಿದ್ದು, ಪ್ರಾರಂಭೋತ್ಸವದ ಶುಭ ಗಳಿಗೆಯಲ್ಲಿ ಶಿರಾಳಕೊಪ್ಪ ಭಂಡಾರಿ ಕುಟುಂಬದ ಹಿರಿಯರಾದ ಶ್ರೀ ಜೋಗು ಭಂಡಾರಿಯವರು, ಶ್ರೀಮತಿ ವಸಂತಮ್ಮ ಜೋಗು ಭಂಡಾರಿಯವರು, ಶ್ರೀ ಗಣೇಶ್ ಭಂಡಾರಿಯವರು, ಶ್ರೀಮತಿ ಪುಷ್ಪಾ ಗಣೇಶ್ ಭಂಡಾರಿಯವರು, ಶ್ರೀಮತಿ ಅನುಷಾ ಪ್ರಭಾಕರ ಭಂಡಾರಿ, ಬೇಬಿ ಅನ್ವಿತ, ಬೇಬಿಅಶ್ವಿತ,ಬಂಧುಗಳು ಮತ್ತು ಆತ್ಮೀಯರು ಉಪಸ್ಥಿತರಿದ್ದು ನೂತನ ಉದ್ಯಮಕ್ಕೆ ಶುಭ ಕೋರಿದರು.


ಶ್ರೀ ಪ್ರಭಾಕರ್ ಭಂಡಾರಿಯವರು ನೂತನವಾಗಿ ಆರಂಭಿಸಿರುವ ಮಾಡರ್ನ್‌ ಪುಷ್ಪಕ್ ಮೆನ್ಸ್ ಪಾರ್ಲರ್ ಯಶಸ್ವಿಯಾಗಲಿ. ಅವರ ಉದ್ಯಮದಲ್ಲಿ ಭಗವಂತನು ಉತ್ತರೋತ್ತರ ಅಭಿವೃದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

 

-ಭಂಡಾರಿವಾರ್ತೆ.

1 thought on “ಶಿರಾಳಕೊಪ್ಪದ ಪ್ರಭಾಕರ ಭಂಡಾರಿಯವರ ಮಾಡರ್ನ್ ಪುಷ್ಪಕ್ ಮೆನ್ಸ್ ಪಾರ್ಲರ್ ಶುಭಾರಂಭ

Leave a Reply

Your email address will not be published. Required fields are marked *