January 18, 2025
e8312fc2-1ff9-4dff-a681-d3060ab8ea75

ಮಂಗಳೂರಿನ ಅಳಪೆಯ ಜಪ್ಪಿನ ಮೊಗರು ಮೊಹನ್ ಭಂಡಾರಿ ಕತಾರ್ ನಲ್ಲಿ ವಿಧಿವಶ

ಮಂಗಳೂರಿನ ಬಳಿಯಿರುವ ಅಳಪೆಯ ಜಪ್ಪಿನ ಮೊಗರು ದಿವಂಗತ ಮಾರಪ್ಪ ಭಂಡಾರಿಯವರ ಪುತ್ರ ಶ್ರೀ ಮೋಹನ್ ಭಂಡಾರಿಯವರು ತಾರೀಕು 17 ರ ಶುಕ್ರವಾರ ಬೆಳಿಗ್ಗೆ ಕತಾರ್ ನ ಸರಕಾರಿಆಸ್ಪತ್ರೆಯೊಂದರಲ್ಲಿ ನಿಧನರಾದರು.ಇವರಿಗೆ ಸುಮಾರು 57 ವರ್ಷ ವಯಸ್ಸಾಗಿತ್ತು .

ತೀವ್ರ ಹೃದಯಾಘಾತದಿಂದ ಫೆಬ್ರವರಿ 12 ರಂದು ಕತಾರ್ ನಲ್ಲಿರುವ ಸರಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮೋಹನ್ ಭಂಡಾರಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೋಹನ್ ರನ್ನು ಉಳಿಸಲು ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಳೆದ 5 ದಿನಗಳಿಂದ ಪಟ್ಟ ಶ್ರಮ ಫಲಕಾರಿಯಾಗಲಿಲ್ಲ.

ಕಳೆದ 26 ವರ್ಷಗಳಿಂದ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಭಂಡಾರಿಯವರು ಅಲ್ಲಿರುವ ಖ್ಯಾತ ಕಂಪನಿಗಳಾದ ಕತಾರ್ ಪೆಟ್ರೋಸರ್ವ್ ಮತ್ತು ಕ್ಯೂಕಾನ್ ನಲ್ಲಿ ಸೇವೆ ಸಲ್ಲಿಸಿದ್ದರು.
ಸಮಾಜ ಸೇವೆಯಲ್ಲಿ ತನ್ನನು ತೊಡಗಿಸಿಕೊಂಡಿದ್ದ ಮೋಹನ್ , ತುಳುಕೂಟ ಕತಾರ್ ನಲ್ಲಿ ಪದಾಧಿಕಾರಿಯಾಗಿ , ಕನ್ನಡ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿ ಮತ್ತು ಇತರ ಸಮಾಜ ಮುಖಿ ಸಂಘಟನೆಗಳಲ್ಲಿ ಸೇವೆಗೈದಿದ್ದರು.

ಮೃತರು ಧರ್ಮಪತ್ನಿ ಶ್ರೀಮತಿ ಬೇಬಿ , ಒಬ್ಬಳು ಮಗಳು ಅನನ್ಯ ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಸಹಿಸಲು ಸಾಧ್ಯವಿಲ್ಲದ ನೋವಿನ ನಡುವೆಯೂ ಮೋಹನ್ ಭಂಡಾರಿಯವರ ಇಚ್ಛೆಯಂತೆ ಅವರ ಅಂಗಾಂಗವನ್ನು ದಾನ ಮಾಡಲು ಕುಟುಂಬವು ಇಂದು ಸಮ್ಮತಿ ಸೂಚಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವುದು ವಿಶೇಷ .

ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನ್ನು ಕುಟುಂಬಕ್ಕೆ ಕರುಣಿಸಲಿ ಎಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *