January 18, 2025
ºÀUÀÎzÀ

ಭಂಡಾರಿ ಸಮಾಜ ಸಂಘ, ಬೆಂಗಳೂರು ವಲಯದ ಮಾಸಿಕ ಸಭೆಯು ಫೆಬ್ರವರಿ 17,2019 ರ ಭಾನುವಾರ ರಾಜಾಜಿನಗರದ ಹೋಟೆಲ್ ಕದಂಬದಲ್ಲಿ ಸಂಘದ ನೂತನ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ ಇವರ ಅಧ್ಯಕ್ಷತೆಯಲ್ಲಿ ಮದ್ಯಾಹ್ನ 3 ಘಂಟೆಗೆ ಆರಂಭಗೊಂಡಿತು. ನೂತನವಾಗಿ ಆಯ್ಕೆಯಾದ ಸಂಘದ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆ ಇದಾಗಿದ್ದು, ಹೆಚ್ಚಿನ ಭಂಡಾರಿ ಬಂಧುಗಳು ಹಾಜರಿದ್ದು, ಸಮಾಜದ ಸೇವೆಗೆ ತಮ್ಮ ಪ್ರೋತ್ಸಾಹ ಮತ್ತು ಕಳಕಳಿಯನ್ನು ವ್ಯಕ್ತಪಡಿಸಿದರು.

ನೂತನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲಾ ಬಂಧುಗಳನ್ನು ಸಭೆಗೆ ಸ್ವಾಗತಿಸಿದರು.

ಸಭೆ ಪ್ರಾರಂಭಕ್ಕೆ ಮೊದಲು ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ಭಯತ್ಪೋದಕರ ದಾಳಿಗೆ  ಹುತಾತ್ಮರಾದ ನಮ್ಮ ವೀರ ಸೈನಿಕರು ಮತ್ತು ಇತ್ತೀಚೆಗೆ ನಮ್ಮನ್ನಗಲಿದ ಭಂಡಾರಿ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ನಂತರ ಪದ್ದತಿಯಂತೆ ಹಿಂದಿನ ಪದಾಧಿಕಾರಿಗಳಿಂದ ನೂತನ ಕಾರ್ಯಕಾರಿ ಮಂಡಳಿಗೆ ಕಾಗದ ಪತ್ರಗಳು, ಲೆಕ್ಕಪತ್ರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು. ಕೆಲವು ತಾಂತ್ರಿಕ  ಕಾರಣಗಳಿಂದ ಲೆಕ್ಕ ಪತ್ರಗಳನ್ನು ಹಸ್ತಾಂತರ ಮಾಡುವ ಕೆಲಸ ಸಂಪೂರ್ಣವಾಗದೆ ಮುಂದೂಡಲಾಯಿತು. 

ಹೊಸ ಸಮಿತಿಯು ಬಾಕಿ ಉಳಿದಿದ್ದ ಇತರ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಅಧ್ಯಕ್ಷರು, ಸಭಾ ಪ್ರತಿನಿಧಿಗಳು ಮತ್ತು ಹಾಜರಿದ್ದ ಸಂಘದ ಹಿರಿಯರ ಅಣತಿಯಂತೆ ಪೂರ್ಣಗೊಳಿಸಲಾಯಿತು.

ಹೊಸ ಸಮಿತಿಯ ಮುಂದಿನ  ಕಾರ್ಯಚಟುವಟಿಕೆಯ ಕ್ರಿಯಾ ಯೋಜನೆಯ ಮುನ್ನೋಟವನ್ನು  ತಯಾರಿಸಿ ಸಭೆಯಲ್ಲಿ ಮಂಡಿಸಲಾಯಿತು.

ಅದರಂತೆ….

1. ಸದರಿ ಸಂಘದಲ್ಲಿ 991 ಸದಸ್ಯರಿದ್ದಾರೆ ಎಂಬ ಹಿಂದಿನ ಕಮಿಟಿಯ ಮಾಹಿತಿಯನ್ನು ಆಧರಿಸಿ ಎಲ್ಲಾ ಸದಸ್ಯರ ಮಾಹಿತಿಯನ್ನು ಕಲೆ ಹಾಕುವ ಮತ್ತು ಅರ್ಜಿಯನ್ನು ತಯಾರಿಸಿ ಎಲ್ಲಾ ಸದಸ್ಯರ ದಾಖಲೆ ಕೈಪಿಡಿ ತಯಾರಿಸುವುದು. ಇದಕ್ಕೆ ಒಂದು ಕಾರ್ಯಪಡೆ ರಚಿಸಿ, ಘಟಕಗಳ ಸಹಕಾರ ಪಡೆದು ಕಾರ್ಯಗತಗೊಳಿಸುವುದು.

2. ಹಾಲಿ ಸಂಘದ ಲೆಕ್ಕಪತ್ರಗಳ ದಾಖಲೆ ಪರಿಶೀಲಿಸಿ ಅನುಮೋದಿಸಿ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಲೆಕ್ಕಪತ್ರವನ್ನು ಸಭೆಯ ಮುಂದಿರಿಸಿ ಸಲಹೆ ಪಡೆಯುವುದು.

3. ಹಾಲಿ ಸಂಘದ ನೋಂದಣಿ ನವೀಕರಣ, ಸರ್ಕಾರದ ನೀತಿ ನಿಯಮದಂತೆ  ನವೀಕರಣಗೊಳಿಸ ಬೇಕಾದ ತುರ್ತು ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಸಭೆಗೆ ವಿವರಿಸಲಾಯಿತು. 

4. ಸಂಘದ ಸ್ಥಾಪಿತ ಸದಸ್ಯರು ಮತ್ತು ಸಮಾಜದ ಗುರುಹಿರಿಯರನ್ನು ಬೇಟಿ ಮಾಡಿ ಚರ್ಚಿಸಿ , ಗುರುಹಿರಿಯರ  ಒಂದು ಸಲಹಾ ಸಮಿತಿಯನ್ನು ರಚಿಸುವುದು. 

5. ಕಾರ್ಯಕಾರಿ ಸಮಿತಿ ಸದಸ್ಯರ ಜವಾಬ್ದಾರಿ, ನೀತಿ ನಿಯಮಗಳ ಕೈಪಿಡಿ ರಚಿಸುವುದು.

6. ಕೇಂದ್ರ ವಲಯ ಮತ್ತು ಘಟಕಗಳ ಪರಸ್ಪರ ಸಂವಹನ ಮತ್ತು ಸಂಬಂಧ ವೃದ್ಧಿಗೆ ಕಾರ್ಯಾಗಾರ ಏರ್ಪಡಿಸುವುದು ಮತ್ತು ಅದನ್ನು ಕಾರ್ಯ ರೂಪಕ್ಕೆ ತರುವುದು.

7. ವಿದ್ಯಾ ಉನ್ನತಿ ಮತ್ತು ವೃತ್ತಿ ಮಾರ್ಗದರ್ಶಿ ಕಾರ್ಯಾಗಾರ ಹಾಗೂ ಅವುಗಳ ನೆರವೇರಿಕೆಗೆ “ನಾಗ ದೀಪಿಕಾ” ಎಂಬ ಕಾರ್ಯಕ್ರಮದ ಪರಿಚಯ.

8. ಪರಸ್ಪರ ಕಲಿಕೆ ಹಾಗೂ ಆದರ್ಶ ಚಿಂತನೆಗಾಗಿ ಘಟಕಗಳು, ಇತರೆ ವಲಯಗಳು,ಅನುಸರಿಸುತ್ತಿರುವ ಉತ್ತಮ ಆದರ್ಶಗಳನ್ನು, ಚಿಂತನೆಗಳನ್ನು ಅಭ್ಯಸಿಸಿ ಅಳವಡಿಸಿಕೊಳ್ಳುವುದು.

9. ಘಟಕ, ಸಮಾಜ, ಸಹ ಸಮಾಜಗಳ ಸಮಾರಂಭ ಮತ್ತು ಚರ್ಚೆಗಳಿಗೆ ಹಾಜರಾಗಿ ವರದಿ ನೀಡಲು ಅಧಿಕೃತ ಪ್ರತಿನಿಧಿಯನ್ನು ನೇಮಿಸುವುದು. 

10. ಎಲ್ಲಾ ಘಟಕಗಳಲ್ಲಿ “ಮಹಿಳಾ ವಿಭಾಗ” ವನ್ನು ಅನುಷ್ಠಾನಗೊಳಿಸುವುದು  ಇನ್ನೂ ಮುಂತಾದ ಯೋಜನೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು. 

ಸಭೆಯ ಹಿರಿಯರ ಸಲಹೆಯಂತೆ ಹೊಸ ಸದಸ್ಯರನ್ನು  ಸಂಘಕ್ಕೆ ಸೇರಿಸುವ ಕೆಲಸ ಪ್ರಾರಂಭಿಸಿ ಸಂಘದ ಆಭಿವೃದ್ಧಿಗೆ ಹಾಗೂ ಸಮಾಜ ಸೇವೆಗೆ ತೊಡಗಿಸಿಕೊಳ್ಳುವಂತೆ  ತೀರ್ಮಾನಿಸಲಾಯಿತು. 

ಎಲ್ಲಾ ಘಟಕಗಳಿಗೆ ಅವರದೇ ಆದಂತಹ  ಸಾಂಫಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಜವಾಬ್ದಾರಿಯನ್ನು  ಇನ್ನೂ ಹೆಚ್ಚಿಸುವುದರೊಂದಿಗೆ ಸಮಾಜದ ಎಲ್ಲಾ   ಭಾಗಕ್ಕೂ ಸೇವೆಯ ಫಲ ತಲುಪಿಸುವತ್ತ ಚರ್ಚಿಸಲಾಯಿತು. 

ತುರ್ತು ಅಥವಾ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಇನ್ನು ಮುಂದಿನ ಮಾಸಿಕ ಸಭೆಯನ್ನು ಪ್ರತೀ ತಿಂಗಳ ಮೊದಲ ಭಾನುವಾರವೇ ನಡೆಸುವುದೆಂದು ತೀರ್ಮಾನಿಸಲಾಯಿತು. 

ಇಂದಿನ ಸಭೆಯ ನಂತರ ಸಂಪೂರ್ಣಗೊಂಡ ಕಮಿಟಿ ಈ ರೀತಿ ಇರುತ್ತದೆ. 

ಅಧ್ಯಕ್ಷರು : ಶ್ರೀ ಮಾಧವ ಭಂಡಾರಿ ಸಾಗರ.

ಉಪಾಧ್ಯಕ್ಷರು: ಶ್ರೀ ಮೋಹನ ಭಂಡಾರಿ ಬಾಳೆಹೊನ್ನೂರು ಮತ್ತು  ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು.

ಪ್ರಧಾನ ಕಾರ್ಯದರ್ಶಿ: ಶ್ರೀ ಸುಧಾಕರ.ಆರ್.ಭಂಡಾರಿ. ಶಿರಾಳಕೊಪ್ಪ.

ಕೋಶಾಧಿಕಾರಿ : ಶ್ರೀ ಕುಶಾಲ್ ಭಂಡಾರಿ. 

ಜಂಟಿ ಕಾರ್ಯದರ್ಶಿ: ಶ್ರೀಮತಿ ಸರಿತಾ ಅರುಣ್ ಕುಮಾರ್

ಸಂಘಟನಾ ಕಾರ್ಯದರ್ಶಿ: 
ಶ್ರೀ ಪ್ರದೀಪ್ ಪಲಿಮಾರು  ಮತ್ತು ಶ್ರೀಮತಿ ಅಕ್ಷತಾ ಸದಾನಂದ.

ಕಾರ್ಯಕಾರಿ ಸಮಿತಿ: 

ಶ್ರೀ ಮಾಧವ ಭಂಡಾರಿ ಬೆಂಗಳೂರು.
ಶ್ರೀ ಶ್ರೀಧರ ಭಂಡಾರಿ ದಾಸರಹಳ್ಳಿ, 
ಶ್ರೀ ರಾಜಶೇಖರ ಭಂಡಾರಿ, ಶ್ರೀ ಜಗದೀಶ್ ಕುರುಬರಹಳ್ಳಿ, 
ಶ್ರೀ ಹರಿಕಿರಣ್, 
ಶ್ರೀ ನಾಗೇಶ್ ವಿದ್ಯಾರಣ್ಯಪುರ, ಶ್ರೀ ರಾಘವೇಂದ್ರ ಭಂಡಾರಿ ಬಸ್ರೂರು, 
ಶ್ರೀ ರತ್ನಾಕರ ಭಂಡಾರಿ (ಕದಂಬ), 
ಶ್ರೀ ಸದಾನಂದ ಭಂಡಾರಿ,
ಶ್ರೀ ಪ್ರಕಾಶ್ ಕುತ್ತೆತ್ತೂರು, 
ಶ್ರೀ ಪ್ರಸಾದ್ ಪುತ್ತೂರು, 
ಶ್ರೀ ಸುಜಿತ್ ಭಂಡಾರಿ, ಶ್ರೀ ರವಿನಾಥ ಭಂಡಾರಿ, 
ಶ್ರೀ ಕಾರ್ತಿಕ್ ವಿ ಭಂಡಾರಿ, 
ಶ್ರೀ  ಆದರ್ಶ ಭಂಡಾರಿ,
ಶ್ರೀ  ಅರುಣ್ ಭಂಡಾರಿ, 
ಕು. ಶೃತಿಕಾ ಬನ್ನಂಜೆ, 
ಶ್ರೀ  ಗಣೇಶ್ ಭಂಡಾರಿ ಮೂಲ್ಕಿ, ಶ್ರೀ ಕರಣ್ ಸುಧಾಕರ ಭಂಡಾರಿ ಹಾಗೂ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಅಥವಾ ಘಟಕಸಭಾ ಸೂಚಿತ ಪ್ರತಿನಿಧಿಗಳು.

ಲಘು ಉಪಹಾರ ಮತ್ತು ಕೋಶಾಧಿಕಾರಿ ಶ್ರೀ ಕುಶಾಲ್ ಭಂಡಾರಿಯವರ ವಂದನಾರ್ಪಣೆಯೊಂದಿಗೆ ಸಭೆಗೆ ಮಂಗಳ ಹಾಡಲಾಯಿತು.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *