ಮೂಡಬಿದ್ರೆ ಭಂಡಾರಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸಮಾಜ ಬಂಧುಗಳ 8 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಅಗಸ್ಟ್ 5 ಭಾನುವಾರದಂದು ಮೂಡಬಿದ್ರೆ ಎಮ್ .ಸಿ. ಎಸ್ . ಬ್ಯಾಂಕ್ ಸಭಾಂಗಣದಲ್ಲಿ ಜರಗಿತು .
ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮ ಉದ್ಘಾಟಿಸಿದರು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಂಡಾರಿ ಸಂಘವು ಇಂದಿಗೂ ತುಳು ಜಾನಪದ ಕ್ರೀಡೆಗೆ ಪ್ರಾಶಸ್ತ್ಯ ಕೊಡುವುದು ಹೆಮ್ಮೆಯ ವಿಷಯವಾಗಿದೆ ಹಾಗೂ ತಮ್ಮ ಸಂಘಕ್ಕೆ ಯಾವ ರೀತಿಯ ಸಹಾಯಕ್ಕೂ ತುಳುನಾಡು ರಕ್ಷಣಾ ವೇದಿಕೆ ಸಿದ್ಧ ಎಂದು ಹೇಳಿದರು .
ಮುಖ್ಯ ಅತಿಥಿಯಾದ ಸತೀಶ್ ಸಾಲಿಯಾನ್ ಅಧ್ಯಕ್ಷ ಕನ್ನಡ ಜಾಗ್ರತದಳ ಇವರು ಮಾತನಾಡಿ ತಾವು ಆರೋಗ್ಯವಾಗಿ ಇರಲು ಹಿಂದಿನ ಕಾಲದ ತಿಂಡಿ ತಿನಿಸು ಮತ್ತು ಔಷಧಿಗಳನ್ನು ನೆನಪಿಸಿದರು. ಮತ್ತೋರ್ವ ಅತಿಥಿ ಗೋವಿಂದ ಭಂಡಾರಿ ಇವ೯ತ್ತೂರು ಸಾಹಿತಿ ಮತ್ತು ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಮಾತನಾಡಿ ಹಿಂದಿನ ಔಷಧಿ ಪದ್ದತಿಯನ್ನು ವಿವರಿಸಿದರು .
ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೂಡಬಿದ್ರೆ ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಎನ್.ಪ್ರಕಾಶ್ ಭಂಡಾರಿ ಮಾತನಾಡಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಸಲು ಸಹಕರಿಸಿದ ಪದಾಧಿಕಾರಿಗಳು ಹಾಗೂ ಭಂಡಾರಿ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದ್ದರು.
ತುಳು ಚಲನಚಿತ್ರ ನಟ ಪತ್ರಕರ್ತ ಸುಭಾಸ್ ಶೆಟ್ಟಿ , ಮೂಡಬಿದ್ರೆ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರವಿರಾಜ್ ಭಂಡಾರಿ ಕರಿಂಜೆ , ನೆಲ್ಲಿಗುಡ್ಡೆ ಮಿತ್ರ ಮಂಡಲಿ ಅಧ್ಯಕ್ಷ ಪ್ರಸಾದ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು . ಮೂಡಬಿದ್ರೆ ಭಂಡಾರಿ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷೆ ವಸಂತಿ ಜೆ ಭಂಡಾರಿ , ಅಧ್ಯಕ್ಷ ಪ್ರಸಾದ್ ಭಂಡಾರಿ , ನಿಕಟ ಪೂವ೯ ಅಧ್ಯಕ್ಷ ಪ್ರಶಾಂತ್ ಭಂಡಾರಿ , ಉಪಾಧ್ಯಕ್ಷೆ ಸಂದ್ಯಾ ಭಂಡಾರಿ , ಮಾಜಿ ಅಧ್ಯಕ್ಷ ಹಾಗೂ ಪುರಸಭೆಯ ಸದಸ್ಯ ರಮೇಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ನಿಶ್ಮಿತ ಇವರ ಪ್ರಾರ್ಥನೆಯೊಂದಿಗೆ ಕಾಯ೯ಕ್ರಮ ಆರಂಭಿಸಲಾಯಿತು. ಆದ್ಯಾ ಇವರ ಭರತನಾಟ್ಯ ಸಭಿಕರೆಲ್ಲರ ಮೆಚ್ಚುಗೆ ಪಾತ್ರವಾಯಿತು.
ಭಂಡಾರಿ ಬಂದುಗಳ ಮನೆಯಲ್ಲಿ ತಾವು ತಯಾರು ಮಾಡಿ ತಂದ ಸುಮಾರು 57 ಬಗ್ಗೆಯ ತಿಂಡಿ ತಿನಿಸುಗಳು ಎಲ್ಲರನ್ನೂ ಮನಸೂರೆಗೊಳಿಸಿತ್ತು. ವಿವಿಧ ಜಾನಪದ ಕ್ರೀಡೆಯು ನಡೆಯಿತು ಕ್ರೀಡೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಕರಿಂಜೆ ಕಾಯ೯ಕ್ರಮ ನಿರೂಪಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ಭಂಡಾರಿ ಧನ್ಯವಾದವನ್ನಿತ್ತರು.