
ಮೂಡುಬಿದಿರೆ ಕೆಸರುಗದ್ದೆಯ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ರಮೇಶ್ ಭಂಡಾರಿ ದಂಪತಿಯ ದ್ವಿತೀಯ ಪುತ್ರ…
ಚಿ|| ಪ್ರವೀಣ್ ಭಂಡಾರಿ.
ಮತ್ತು
ಚಿ||ಸೌ|| ಅಶ್ವಿತಾ.
ಮುಡಿಪು ಹೂವುಹಾಕುವಕಲ್ಲು ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ಮಲ್ಲಿಕಾ ಶೇಖರ್ ಭಂಡಾರಿ ದಂಪತಿಯ ಪ್ರಥಮ ಪುತ್ರಿ.





ಇವರ ನಿಶ್ಚಿತಾರ್ಥ ಮಹೋತ್ಸವವು ಮುಡಿಪು “ಮಂಗಳಾ ಸಭಾಂಗಣ” ದಲ್ಲಿ ಫೆಬ್ರವರಿ 11,2019 ರ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧು ಬಾಂಧವರು, ಆತ್ಮೀಯರು, ಸ್ನೇಹಿತರು, ಹಿತೈಷಿಗಳು ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ಪ್ರವೀಣ್ ಮತ್ತು ಆಶ್ವಿತಾರಿಗೆ ಶುಭ ಹಾರೈಸಿದರು.





ನಿಶ್ಚಿತಾರ್ಥ ಸಂಭ್ರಮದಲ್ಲಿ ಒಂದಾದ ಪ್ರವೀಣ್ ಮತ್ತು ಅಶ್ವಿತಾ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿ, ಇವರ ಜೀವನ ಸುಖಮಯವಾಗಿರಲಿ, ಇವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಶಾಂತಲಾ ಹರೀಶ್ ಭಂಡಾರಿ.ವಿಟ್ಲ.