December 3, 2024
2

ತಾಯಂದಿರೇ, ಮಗುವಿಗೆ ಹಾಲುಣಿಸುವಾಗ ಮೊಬೈಲ್ ಬಳಸುತ್ತೀರಾ?

ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ಬದಲಾವಣೆಯು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಬ್ಬರಲ್ಲೂ ಸ್ಮಾಟ್‌ಫೋನ್ ಇದೆ. ಮಕ್ಕಳಿಗಂತೂ ಆಟವಾಡಲು ಆಟಿಕೆಗಳ ಬದಲು ಫೋನ್‌ಗಳೇ ಬೇಕು. ಪೋಷಕ-ಮಕ್ಕಳ ಸಂವಹನದ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚು ಪ್ರಚಲಿತವಾಗಿದೆ. ಅದರಲ್ಲೂ ಹಾಲುಣಿಸುವ ತಾಯಂದಿರುವ ಮಗುವಿಗೆ ಹಾಲುಣಿಸುವಾಗ ಮೊಬೈಲ್‌ನ್ನು ಬಳಸುವುದು ಎಷ್ಟರ ಮಟ್ಟಿಗೆ ತಾಯಿ ಹಾಗು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಯೋಣ.

​ಸ್ತನ್ಯಪಾನ ಮಾಡುವಾಗ ಮೊಬೈಲ್ ಬಳಸುವುದು​

ಅದರಲ್ಲೂ ಪುಟ್ಟ ಮಗುವನ್ನು ಹೊಂದಿರುವ ತಾಯಂದಿರಿಗೆ ವಿಶ್ರಾಂತಿ ಪಡೆಯಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಸ್ಮಾಟ್‌ಫೋನ್ ಬಳಸಲೂ ಸಮಯ ಸಿಗೋದಿಲ್ಲ. ಅದಕ್ಕಾಗಿ ಅವರು ಮಗುವಿಗೆ ಹಾಲುಣಿಸುವ ಸಮಯದಲ್ಲಿ ಫೋನ್ ಬಳಸುತ್ತಾರೆ.

ಒಂದೆಡೆ, ಸ್ಮಾರ್ಟ್‌ಫೋನ್‌ಗಳಂತಹ ಹೊಸ ತಂತ್ರಜ್ಞಾನಗಳು ನಮ್ಮ ಜೀವನವನ್ನು ಅನುಕೂಲಕರವಾಗಿಸುತ್ತದೆ. ಆದರೆ ಇನ್ನೊಂದೆಡೆ, ಸ್ತನ್ಯಪಾನ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ತಾಯಂದಿರು ಶಿಶು ಮತ್ತು ಮಗುವಿನ ಕಡೆಗೆ ಗಮನ ಹರಿಸುವುದನ್ನು ಮಾರ್ಪಡಿಸುತ್ತದೆ.

ತಾಯಿಯ ಶಾರೀರಿಕ ಪ್ರಚೋದನೆ​

ತಾಯಿ ಮತ್ತು ಮಗುವಿನ ನಡುವಿನ ಪ್ರಾಥಮಿಕ ಸಾಮಾಜಿಕ ಸಂವಹನಗಳು ಶಿಶುಗಳ ಬೆಳವಣಿಗೆಗೆ ನಿರ್ಣಾಯಕವಾದ ಆರಂಭಿಕ ಪರಿಸರ ಪರಿಸ್ಥಿತಿಗಳನ್ನು ರೂಪಿಸುತ್ತವೆ. ಸ್ತನ್ಯಪಾನ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುವುದರಿಂದ, ತಾಯಿಯ ಭಂಗಿ ಮತ್ತು ಮಗುವಿನೊಂದಿಗೆ ಸಂವಹನವು ದುರ್ಬಲಗೊಳ್ಳುವ ಸಾಧ್ಯತೆಯಿದೆ.

ಮೊಬೈಲ್ ಬಳಕೆಯ ಪರಿಣಾಮಗಳು

ಹಾಲುಣಿಸುವಾಗ ಮೊಬೈಲ್ ಬಳಸುವುದರಿಂದ ತಾಯಿಯಲ್ಲಿ ಬೆನ್ನುನೋವಿನಂತಹ ದೈಹಿಕ ನೋವು, ಸ್ತನ್ಯಪಾನದ ಬಗ್ಗೆ ಶಿಶುವಿನ ಅತೃಪ್ತಿ ಮತ್ತು ಕಳಪೆ ನಿದ್ರೆಯ ಗುಣಮಟ್ಟಕ್ಕೆ ಕಾರಣವಾಗುತ್ತದೆ.

ತಾಯಿಯ ಭಂಗಿ ಮತ್ತು ಮಗುವಿನೊಂದಿಗಿನ ಸಂವಹನವು ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಯ ಉಪಸ್ಥಿತಿ ಅಥವಾ ಅನುಪಸ್ಥಿತಿಯ ಆಧಾರದ ಮೇಲೆ ಭಿನ್ನವಾಗಿರುತ್ತದೆ ಮತ್ತು ಮಗುವಿಗೆ ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ.

ದೈನಂದಿನ ಜೀವನದಲ್ಲೂ ಪ್ರಭಾವ ಬೀರುತ್ತದೆ​

ಸ್ಮಾಟ್‌ಫೋನ್ ನಮ್ಮ ದೈನಂದಿನ ಜೀವನದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ಮಾರ್ಪಟ್ಟಿದೆ. ಇದು ತಾಯಿಯ ಸೂಕ್ಷ್ಮತೆ ಮತ್ತು ಗಮನವನ್ನು ಸಂಭಾವ್ಯವಾಗಿ ಅಡ್ಡಿಪಡಿಸುತ್ತದೆ.

ಇಲ್ಲಿಯವರೆಗೆ, ಸ್ತನ್ಯಪಾನ ಸಮಯದಲ್ಲಿ ತಾಯಿಯ ಸ್ಮಾರ್ಟ್‌ಫೋನ್ ಬಳಕೆಯು ತಾಯಂದಿರ ಶಾರೀರಿಕ ಪ್ರತಿಕ್ರಿಯೆಗಳು ಅಥವಾ ಅವರ ಶಿಶುಗಳಿಗೆ ಅವರ ಗಮನವನ್ನು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಯಾವುದೇ ವೈಜ್ಞಾನಿಕ ಪರೀಕ್ಷೆಗಳಿಲ್ಲ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: VK

Leave a Reply

Your email address will not be published. Required fields are marked *