ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ – 4
ಈರುಳ್ಳಿ -2 (ದೊಡ್ಡದು)
ಟೊಮೊಟೊ-2
ಹಸಿಮೆಣಸು- 2-3
ಶುಂಠಿ ಬೆಳ್ಳುಳ್ಳಿ ಪೇಸ್ಟ್ -2 ಚಮಚ
ಗರಂಮಸಾಲೆ ಪುಡಿ – 1 ಚಮಚ
ಖಾರದ ಪುಡಿ – 1ಚಮಚ
ಅರಿಶಿನ ಪುಡಿ -ಚಿಟಿಕೆಯಷ್ಟು
ಕರಿಬೇವು -8-10
ಎಣ್ಣೆ -5-6 ಚಮಚ
ಮಾಡುವ ವಿಧಾನ
ಮೊದಲಿಗೆ ಈರುಳ್ಳಿ ಹಾಗೂ ಟೊಮೊಟೊವನ್ನು ಬೇರೆ ಬೇರೆಯಾಗಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಗೆ ಎಣ್ಣೆಹಾಕಿ ಅದು ಬಿಸಿಯಾದ ನಂತರ ಕರಿಬೇವು ,ಹಸಿಮೆಣಸು ಹಾಕಿ ಸ್ವಲ್ಪ ಪ್ರೈ ಮಾಡಿ, ನಂತರ ತಯಾರಿಸಿಟ್ಟುಕೊಂಡ ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೆಸ್ಟ್ ಹಾಕಿ ಹಸಿವಾಸನೆ ಹೋಗುವ ತನಕ ಪ್ರೈ ಮಾಡಿ. ನಂತರ ಅದಕ್ಕೆ ಅರಿಶಿನ, ಗರಂಮಸಾಲೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿಟ್ಟ ಟೊಮೊಟೊ ಪೇಸ್ಟ್ ಹಾಗೂ ಸ್ವಲ್ಪ ನೀರು ಹಾಕಿ ಗ್ರೇವಿಯ ಹದ ಬರುವಷ್ಟು ಕುದಿಸಬೇಕು. ನಂತರ ಅದಕ್ಕೆ ಮೊಟ್ಟೆಯನ್ನು ಭಾಗ ಮಾಡಿಹಾಕಿ ಒಮ್ಮೆ ತಿರುವಿದರೆ ಚಪಾತಿ ಹಾಗೂ ಅನ್ನದೊಂದಿಗೆ ಸವಿಯಲು ಸಿಧ್ಧ.