


ಗೆಳೆಯಾ ನಿನ್ನ ಆಗಮನವಾದಾಗ ನನ್ನ ಮೌನವೆಲ್ಲಾ ಮಾತಾಗುವುದು. ಆ ತಂಪಾದ ಸಂಜೆಯಲಿ ನಿನ್ನ ಕೈ ಬೆರಳುಗಳ ಜೊತೆ ನನ್ನ ಕೈಬೆರಳುಗಳ ಬೆಸೆದು ನಿನ್ನೊಡನೆ ಹೆಜ್ಜೆ ಹಾಕಬೇಕು. ಸಮುದ್ರದ ತೀರದ ಮರಳ ರಾಶಿಯಲಿ ಮನೆಕಟ್ಟಿ ಕುಣಿಯಬೇಕು.ಆ ಅಲೆಯ ರಭಸದ ಹೊಡೆತಕ್ಕೆ ಮನೆ ಮರಳಾಗಿ ಮತ್ತೆ ತೇಲಿಹೋಗುವಾಗ, ನಾ ಮುಗುಳ್ನಕ್ಕು ನಿನ್ನ ನೋಟವ ಸೆಳೆಯಬೇಕು,ನಾ ಕೋಪದಲ್ಲಿ ಕುಳಿತಾಗ ನಿನ್ನ ಸಮಾಧಾನದ ಮಾತುಗಳ ಆಲಿಸುವಾಸೆ. ನಿನ್ನ ನಿಷ್ಕಲ್ಮಶ ಪ್ರೀತಿಗೆ ನಾ ಸೋತು ಕಣ್ಣಿರಿಡಬಹುದೆನೋ.ನಿನ್ನೊಲವ ಪರಿಗೆ ಕರಗಿ, ಪುಟ್ಟ ಮಗುವಾಗಿ ನಿನ್ನ ಮಡಿಲಲ್ಲಿ ನಿದ್ರೆಗೆ ಜಾರುವೆನು.ನಮ್ಮಿಬ್ಬರ ಕನಸುಗಳ ಕುರಿತು ಚರ್ಚಿಸಬಹುದು, ನಿನಗಿಷ್ಟವಾದ ಬಣ್ಣದ ಬಟ್ಟೆಯ ನಾ ಧರಿಸಿ ಅದರ ಹೊಳಪ ನಿನ್ನ ಕಣ್ಣಲ್ಲಿ ಕಾಣುವಾಸೆ, ಇಬ್ಬರು ಮರಳ ರಾಶಿಯಲಿ ಹೆಜ್ಜೆ ಹಾಕೋಣ, ಜೊತೆಜೊತೆಗೆ ನಿನ್ನ ಮಾತು ಕೇಳುತ ನಾ ಮೌನಿಯಾಗಬಹುದೆನೋ. ನಿನ್ನ ದುಃಖ ವೇದನೆಗಳಿಗೆ ತೂಕವೆಷ್ಟಿದೆಯೋ ನನಗೆ ತಿಳಿಯದು, ಆದರೂ ಅದರ ಭಾರವ ಕಡಿಮೆ ಮಾಡಿ ನಿನ್ನ ಮೊಗದಲಿ ನಗುವ ನೋಡಬೇಕು. ನಿನ್ನೆದೆಯ ಮೇಲೆ ಮುಖವನ್ನಿಟ್ಟು ನಸುನಗಬೇಕು. ಕತ್ತಲು ಕವಿಯುವವರೆಗೂ ನಿನ್ನ ಬಾಹುಬಂಧನದಲ್ಲಿ ಬಂಧಿಯಾಗಿ ಜಗತ್ತನ್ನೆ ಒಮ್ಮೆ ಮರೆತುಬಿಡಬೇಕು…..

Wah…super..its very nice …
Nice one 😊😊
ಸಖಿಯ ಸ್ವಗತ…
ಗೆಳತಿಯ ಮನದಿಂಗಿತ…
ಮಡದಿಯ ಮನದಾಸೆ…ಎಲ್ಲದರ
ಮಿಳಿತ ಈ ಬರಹ.
Nice
Super