ಮಾರ್ಚ್ 23 ರ ಶುಕ್ರವಾರ ಕುಂದಾಪುರ ಕೋಣಿಯ ಆಶೀರ್ವಾದ ಹಾಲ್ ನಲ್ಲಿ ಬಸ್ರೂರು ಮಕ್ಕಿಮನೆಯ ಶ್ರೀ ಮಹಾಲಿಂಗ ಭಂಡಾರಿ ಮತ್ತು ಶ್ರೀಮತಿ ವಸಂತಮ್ಮ ಮಹಾಲಿಂಗ ಭಂಡಾರಿ ದಂಪತಿಗಳ ದ್ವಿತೀಯ ಪುತ್ರ
ಚಿ|| ರಾಮಚಂದ್ರ ಭಂಡಾರಿ
ಮತ್ತು ಶಿವಮೊಗ್ಗ ಜಿಲ್ಲೆ ಸೊರಬದ ಶ್ರೀ ಪ್ರಕಾಶ್ ಭಂಡಾರಿ ಮತ್ತು ಶ್ರೀಮತಿ ರೇವತಿ ಪ್ರಕಾಶ್ ಭಂಡಾರಿಯವರ ಪುತ್ರಿ
ಚಿ||ಸೌ||ಶೃತಿ
ಯವರ ವಿವಾಹ ವಿಜೃಂಭಣೆಯಿಂದ ನೆರವೇರಿತು.
ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಶಿರಾಳಕೊಪ್ಪ, ಬಸ್ರೂರು, ಸೊರಬದ ಭಂಡಾರಿ ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರು ಉಪಸ್ಥಿತರಿದ್ದು ನವ ವಿವಾಹಿತರನ್ನು ಹರಸಿ ಹಾರೈಸಿದರು.
ಹೊಸಜೀವನಕ್ಕೆ ಅಡಿಯಿಟ್ಟ ನವಜೋಡಿಗೆ ಶ್ರೀ ದೇವರು ಆಯುರಾರೋಗ್ಯ,ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ,ಮದುವೆಯ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.