ಮೂಡಬಿದ್ರೆ ಅಲಂಗಾರಿನ ಶ್ರೀ ಮಾಧವ ಭಂಡಾರಿ (MR Bhandary) ಯವರು ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ 7 ರಬುಧವಾರ ಬೆಳಿಗ್ಗೆ 10 ಗಂಟೆಗೆ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.ಅವರಿಗೆ ಸುಮಾರು 81 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಾರದಾ ಭಂಡಾರಿ , ಇಬ್ಬರು ಗಂಡು ಮಕ್ಕಳಾದ ಯೋಗೇಶ್ ಭಂಡಾರಿ ಮತ್ತು ವಿನಯ ಭಂಡಾರಿ ಹಾಗೂ ಒಬ್ಬರು ಹೆಣ್ಣು ಮಗಳಾದ ದಿವ್ಯ ಲತಾ ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಎಂ ಆರ್ ಭಂಡಾರಿ ಯವರು ಮುಂಬೈನ ಗಿರೀಶ್ ಡೈ ವರ್ಕ್ಸ್ ಎಂಬ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು.
ಎಂ ಆರ್ ಭಂಡಾರಿ ಯವರು ಮುಂಬಯಿ ಭಂಡಾರಿ ಸೇವಾ ಸಮಿತಿಯ ಮಾಜೀ ಅಧ್ಯಕ್ಷರಾಗಿ ,ಭಂಡಾರಿ ಸಮಾಜ ಸಂಘ ಮೂಡುಬಿದಿರೆಯ ಸ್ಥಾಪಕ ಅದ್ಯಕ್ಷ ರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು.
ಒಂದು ಕಾಲದಲ್ಲಿ ನಿರ್ಜೀವವಾಗಿದ್ದ ಮುಂಬೈ ಭಂಡಾರಿ ಸೇವಾ ಸಮಿತಿಗೆ ಹೊಸ ಕಾಯಕಲ್ಪ ಕೊಟ್ಟ ಕೀರ್ತಿ ಶ್ರೀ ಮಾಧವ ಭಂಡಾರಿ ( MR Bhandary) ಗೆ ಸಲ್ಲುತ್ತದೆ. ಅದನ್ನು ಪುನರುತ್ಥಾನ ಮಾಡುವಲ್ಲಿ ಸಮಾಜದ ಎಲ್ಲಾ ಸದಸ್ಯರ ಜೊತೆಗೆ ಶ್ರೀ ಮಾಧವಣ್ಣನವರ ಕೊಡುಗೆ ಅಪಾರ.
ಮೃತರ ಅಂತ್ಯ ಸಂಸ್ಕಾರವು ಡಿಸೆಂಬರ್ 8 ರ ಗುರುವಾರ ಮದ್ಯಾಹ್ನ ಮೃತರ ಸ್ವಗೃಹ ಮೂಡಬಿದ್ರೆಯ ಅಲಂಗಾರಿನಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.