January 18, 2025
devadas
ಮಂಚಕಲ್ ನ ದಿ. ಬಾಬು ಭಂಡಾರಿ ಮತ್ತು ಉಡುಪಿ ಕೊಡಂಕೂರು ಸಂತೋಷ ನಿಲಯ ‌‌‌‌‌ ಹಿರೇಬೆಟ್ಟು ದಿ. ನರ್ಸಿ ಭಂಡಾರಿ ದಂಪತಿಗಳ ಮಗನಾದ ಶ್ರೀ ದೇವದಾಸ್ ಭಂಡಾರಿಯವರು 23-06-2018ರಂದು ಬೆಳಿಗ್ಗೆ 9.30ಕ್ಕೆ ಅನಾರೋಗ್ಯದ ಕಾರಣ ನಿಧನರಾದರು.  

ಶ್ರೀಯುತರು ಧರ್ಮಪತ್ನಿ ಲಕ್ಷ್ಮಿ ಭಂಡಾರಿ ಹೆಬ್ರಿ, ಅಕ್ಕ ಶ್ರೀಮತಿ ವಿಜಯಾ ಭಂಡಾರಿ, ಅಣ್ಣಂದಿರಾದ ಶ್ರೀ ಮುದ್ದು ಭಂಡಾರಿ ಮತ್ತು ಶ್ರೀಮತಿ ಕೃಷ್ಣ ಭಂಡಾರಿ , ತಂಗಿ ಶ್ರೀಮತಿ  ಜಯಾ ಎನ್ ಭಂಡಾರಿ. ಮಕ್ಕಳಾದ ಶ್ರೀ ಸಂತೋಷ್ ಭಂಡಾರಿ , ಶ್ರೀ ಸತೀಶ್ಚಂದ್ರ ಭಂಡಾರಿ, ಶ್ರೀ ಸುಕೇಶ್ ಭಂಡಾರಿ, ಶ್ರೀಮತಿ ಸುಷ್ಮಾ ಭಂಡಾರಿ , ಸೊಸೆಯಂದಿರು ,ಅಳಿಯಂದಿರು ,ಮೊಮ್ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿರುತ್ತಾರೆ. ಬಂಧುಗಳು ಹಿತೈಷಿಗಳು ಅಗಲಿದ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.
ಇವರ ಅಂತ್ಯಕ್ರಿಯೆ 24-06-2018ರ ಬೆಳಗ್ಗೆ 9.00 ಗಂಟೆಗೆ ನಡೆಯಲಿದೆ.
ಭಂಡಾರಿ ಬಂಧುವಾದ ಶ್ರೀ ದೇವದಾಸ್ ಭಂಡಾರಿಯವರು ನಮ್ಮನಗಲಿದ್ದು ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರುತ್ತಾ ಭಂಡಾರಿ ಕುಟುಂಬಗಳ ಮನೆಮನದ ಮಾತು ಭಂಡಾರಿ ವಾರ್ತೆ ಸಂತಾಪ ಸೂಚಿಸುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *