
ಬಂಟ್ವಾಳ ಪುರಸಭೆಗೆ ಅಗಸ್ಟ್ 31 ರಂದು ನಡೆಯುವ ಚುನಾವಣೆಗೆ ಬಂಟ್ವಾಳ ಪುರಸಭೆಯ ವಾರ್ಡ್ ನಂಬರ್ ಎರಡು ಇದರ ಬಿ.ಜೆ.ಪಿ.ಪಕ್ಷದ ಅಭ್ಯರ್ಥಿಯಾಗಿ ಸರಳ ಸಜ್ಜನಿಕ, ಪ್ರಾಮಾಣಿಕ ರಾಜಕಾರಣಿ ಮತ್ತು ಧಾರ್ಮಿಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಬಿ. ಪಕ್ಷದ ನಾಮ ಪತ್ರ ಸಲ್ಲಿಸಿದ್ದಾರೆ.
2004 ಅಗಸ್ಟ್ 9 ರಿಂದ 2006 ಡಿಸೆಂಬರ್ 12 ರ ವರೆಗೆ ಮೊದಲ ಅವಧಿಗೆ ಬಂಟ್ವಾಳ ಪುರಸಭೆಯ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಾಮಾಣಿಕ ಸೇವೆ ಗುರುತಿಸಿದ ಪಕ್ಷವು ಎರಡನೇ ಬಾರಿಗೆ ಮತ್ತೊಮ್ಮೆ 2010 ಅಗಸ್ಟ್ 20 ರಿಂದ 2013 ಮಾಚ್೯ 24 ರ ವರೆಗೆ ಕಾರ್ಯನಿರ್ವಹಿಸುವ ಅವಕಾಶ ನೀಡಿತು. ತಮ್ಮ ಅಧ್ಯಕ್ಷ ಅವದಿಯಲ್ಲಿ ಬಂಟ್ವಾಳ ಪುರಸಭೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ.
ಬಂಟ್ವಾಳ ಮಾರ್ಕೆಟ್ ರಸ್ತೆಯ ಶೃಂಗಾರ್ ಜ್ಯುವೆಲ್ಲಸ್೯ನ ಪಾಲುದಾರರಾಗಿ ತನ್ನ ವೃತ್ತಿ ಜೀವನ ನಡೆಸುತ್ತಿದ್ದಾರೆ. ಬಂಟ್ವಾಳ ನಿತ್ಯಾನಂದ ನಗರದ ನಿತ್ಯಾನಂದ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾಗಿ, ಜೊತೆಗೆ ಹಲವಾರು ಸಂಘಟನೆಯಲ್ಲಿ ಗುರುತಿಸಿಕೊಂಡು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ.
ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಮಹತ್ವಾಕಾಂಕ್ಷೆ ಮತ್ತು ಬಂಟ್ವಾಳ ಪುರಸಭೆಯ ಅಭಿವೃದ್ಧಿಗಾಗಿ ಕನಸು ಕಟ್ಟಿಕೊಂಡು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
–ದಿನೇಶ್ ಭಂಡಾರಿ ಬಿ .
ದೂರವಾಣಿ ಸಂಖ್ಯೆ
9886849192
-ಭಂಡಾರಿ ವಾರ್ತೆ