
ಶ್ರೀ ಜಿ. ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಬಿ. ಭಂಡಾರಿ ಕೋಡ್ಯೇಲು- ಮಡಂತ್ಯಾರು ದಂಪತಿಗೆ 26ನೆಯ ವಷ೯ದ ವಿವಾಹ ವಾರ್ಷಿಕೋತ್ಸವದ ಸಂಭ್ರಮ.
ವಿವಾಹ ಎಂದರೆ ಎರಡು ಮುಗ್ಧ ಮನಸ್ಸುಗಳು, ಮೂರು ಗಂಟಿನ ನಂಟಿನ ಮೂಲಕ, ತಮ್ಮ ಬಾಳ ಸಂಗಾತಿಯ ಜೊತೆ ಏಳು ಹೆಜ್ಜೆಗಳನ್ನು ಇಡುವ ಮೂಲಕ ತಮ್ಮ ಜೀವನದಲ್ಲಿ ಬರುವ ಏರಿಳಿತದಲ್ಲಿ ಒಬ್ಬರನ್ನೊಬ್ಬರು ಕೈ ಹಿಡಿದು ಸಾಗುತ್ತೇವೆ ಎಂಬ ನಂಬಿಕೆಯ ಮೂಲಕ ತಮ್ಮ ದಾಂಪತ್ಯದ ನೌಕೆಯನು ಪ್ರಾರಂಭಿಸುತ್ತಾರೆ, ಇಂತಹ ನೌಕೆ ಸಾಗಲು ಪ್ರಾರಂಭವಾಗಿ ಇಂದಿಗೆ 26 ವಸಂತಗಳು ಸಂದಿವೆ,
ಹೀಗೆ ಈ ಜೀವಗಳು 100 ಕಾಲ ತಮ್ಮ ಬಾಳ ನೌಕೆಯನು ಸಾಗಿಸಲಿ ತಮ್ಮ ಜೀವನದ ಅತ್ಯಮೂಲ್ಯ ಕ್ಷಣವನ್ನು ಸಂತೋಷದಿಂದ ಕಳೆಯಲಿ ಎಂದು ಭಗವಂತನಲ್ಲಿ ಕೇಳಿ ಕೊಳ್ಳುತ್ತ ಈ ವಿವಾಹ ಮಹೋತ್ಸವಕ್ಕೆ ಶುಭಾಶಯ ಕೋರುವವರು:
ಗುಂಡಿಯಲ್ಕೆ ಭಂಡಾರಿ ಕುಟುಂಬಸ್ಥರು .
ಪಾರೆಂಕಿ- ಮಡಂತ್ಯಾರು.
ತಮ್ಮ ವೈವಾಹಿಕ ಜೀವನದ 26ನೆಯ ವಷ೯ದ ವಿವಾಹ ಮಹೋತ್ಸವವನ್ನು ಜೂನ್ 24 ನೇ ಶುಕ್ರವಾರದಂದು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ದಂಪತಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವರು ಆಯುರಾರೋಗ್ಯ ಅಷ್ಟೈಶ್ವರ್ಯ ವನ್ನು ಕರುಣಿಸಿ, ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಲ್ಲಿ ಅವರನ್ನು ಪ್ರೇರೇಪಿಸಿಕೊಂಡು ಇಡೀ ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು. ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸಿಕೊಂಡು ಅಭಿನಂದನೆ ಸಲ್ಲಿಸುತ್ತಿದೆ.