January 18, 2025
Harischandra Kadabettu Kadeshivalaya

ಬಂಟ್ವಾಳ ತಾಲ್ಲೂಕು ಕಡೇಶಿವಾಲಯ ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಶ್ರೀ ಹರಿಶ್ಚಂದ್ರ ಕಾಡಬೆಟ್ಟು ಇದೀಗ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.


 ತನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಶ್ರೀ ಹರಿಶ್ಚಂದ್ರ ಕಾಡಬೆಟ್ಟು ಕಡೇಶಿವಾಲಯ ಗ್ರಾಮ ವಲಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗೆಳೆಯರ ಬಳಗ ಆರಿಕಲ್ಲು ಇದರ ಅಧ್ಯಕ್ಷರಾಗಿ ಕಳೆದ 9ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಗ್ರಾಮದ ದೈವದ ನೇಮೋತ್ಸವ ಹಾಗೂ ಆ ಪ್ರಯುಕ್ತ ನಡೆಯುವ ಕೆಸರ್ಡೊಂಜಿ ದಿನದ ಉಸ್ತುವಾರಿಯನ್ನು ವಹಿಸುತ್ತಿದ್ದಾರೆ.

ಆರಿಯಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನಮಾನಗಳು ಗಳಿಸುವ ಅವಕಾಶ ಸಿಗಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಹಾರೈಕೆ

ಹರಿಶ್ಚಂದ್ರ ಕಾಡಬೆಟ್ಟು ಇವರ ಮೊಬೈಲ್ ಸಂಖ್ಯೆ
9972530501
7349497502

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *