
ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಸೊರ್ನಾಡ್ ದಿವಂಗತ ಶ್ರೀ ರಾಜೀವ ಭಂಡಾರಿ ಮತ್ತು ಶ್ರೀಮತಿ ವಿಮಲ ರಾಜೀವ ಭಂಡಾರಿ ದಂಪತಿಯ ಪುತ್ರ
ಚಿ ॥ ಕಿರಣ್
ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವು (ಕೊಕ್ಕಡ ) ಶ್ರೀ ರಾಘವ ಭಂಡಾರಿ ಮತ್ತು ಶ್ರೀಮತಿ ಲೋಲಾಕ್ಷಿ ರಾಘವ ಭಂಡಾರಿ ದಂಪತಿ ಪುತ್ರಿ
ಚಿ ॥ ಸೌ ॥ ಸ್ವಾತಿ

ಇವರ ಶುಭ ವಿವಾಹವು ಡಿಸೆಂಬರ್ ದಿನಾಂಕ 12 ಗುರುವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಾನದಲ್ಲಿ ದೇವಿಯ ಕೃಪಾಕಟಾಕ್ಷ ಯೊಂದಿಗೆ ದೇವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಶುಭ ವಿವಾಹವಾದ ಔತಣ ಕೂಟ ಬಂಟ್ವಾಳದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರು ಬಂದು ಮಿತ್ರರು ಕುಟುಂಬಸ್ಥರು ಹಾಗೂ ಹಿತೈಷಿಗಳ ಆಶೀರ್ವಾದಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.


ನವ ದಂಪತಿ ಚಿರಕಾಲ ಸುಖ ಶಾಂತಿ ನೆಮ್ಮದಿಯ ಬದುಕನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ