January 19, 2025
darshith-bhandary

ಮಂಗಳೂರಿನ ಮೋತಿಮಹಲ್ ರೆಸ್ಟೋರೆಂಟ್ ನಲ್ಲಿ ಜೂನ್ 30 ರಂದು ಆಯೋಜಿಸಿದ್ದ ಮಿಸ್ಟರ್ ಕರ್ನಾಟಕ-2018 ಸ್ಪರ್ಧೆಯಲ್ಲಿ ಭಾಗವಹಿಸಿದ ಕಾರ್ಕಳದ ದರ್ಶಿತ್ ಭಂಡಾರಿ ತೀರ್ಪುಗಾರರ ಗಮನ ಸೆಳೆದು ಮಿಸ್ಟರ್ ಮಂಗಳೂರು-2018 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಡೆದಿರುವ ಜನಪ್ರಿಯತೆಯನ್ನು ಆಧರಿಸಿ ನೀಡಲಾಗುವ ಮಿಸ್ಟರ್ ಮಲ್ಟಿಮೀಡಿಯಾ ಪ್ರಶಸ್ತಿಯನ್ನೂ ಗಳಿಸಿಕೊಂಡಿದ್ದಾರೆ.

ಬಿ.ಬಿ.ಎಮ್ ಪದವೀಧರರಾಗಿರುವ ಇವರು ಪಡುಬಿದ್ರಿಯ ಅಧಾನಿ ಗ್ರೂಪ್ಸ್ ನಲ್ಲಿ ಉದ್ಯೋಗದಲ್ಲಿದ್ದು ಇವರು ಕಾರ್ಕಳದ ಶ್ರೀ ಯೋಗೀಶ್ ಭಂಡಾರಿ ಮತ್ತು ಶ್ರೀಮತಿ ಸುಜಾತಾ ಯೋಗೀಶ್ ಭಂಡಾರಿ ದಂಪತಿಯ ಪುತ್ರ.

ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನ ಗೋಲ್ಡ್ ಫಿಂಚ್ ರೆಸಾರ್ಟ್ಸ್ ನಲ್ಲಿ ನಡೆದ ಮಿಸ್ಟರ್ ಇಂಡಿಯಾ-2018 ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿಯೂ ಮಿಸ್ಟರ್ ಅಟ್ರ್ಯಾಕ್ಟಿವ್ ಪ್ರಶಸ್ತಿಯನ್ನು ಪಡೆದು ಭರವಸೆ ಮೂಡಿಸಿದ್ದರು.

ನಮ್ಮ ಸಮಾಜದ ಸ್ಪುರಧ್ರೂಪಿ ಯುವಕ ದರ್ಶಿತ್ ಮಾಡೆಲಿಂಗ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ,ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು ಗಳಿಸಲಿ ಜೊತೆಗೆ ಚಿತ್ರರಂಗಕ್ಕೂ ಕಾಲಿಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ 

 

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *