November 22, 2024
manoraj rajeev

2015 ರಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲರಾಗಿ ಆಯ್ಕೆಯಾಗಿದ್ದ ಮಂಗಳೂರಿನ ಖ್ಯಾತ ವಕೀಲರಾದ ಮನೋರಾಜ್ ರಾಜೀವ ರವರು ಮತ್ತೊಂದು ಅವಧಿಗೆ ಮರು ಆಯ್ಕೆಯಾಗಿರುತ್ತಾರೆ. 

ಇವರು ಮೂಲತಃ ಮಂಗಳೂರಿನವರಾಗಿದ್ದು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ   ( Deputy Controller of State Account ) ರಾಜೀವ ಕೆಲೆಸಿ ಮತ್ತು ಜಲಜಾಕ್ಷಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದರು. ಮಂಗಳೂರಿನ ಎಸ್ ಡಿ ಎಮ್ ಕಾನೂನು ಪದವಿ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿ ತನ್ನ 23 ನೇ ವಯಸ್ಸಿನಲ್ಲೆ ಅಡ್ವೋಕೇಟ್ ಎಸ್ ಆರ್ ಹೆಗ್ಡೆ ಎಂಬವರ ಜೊತೆ ಕಿರಿಯ ವಕೀಲರಾಗಿ ವಕಾಲತ್ತು ಪ್ರಾರಂಭಿಸಿದರು. ನಂತರ ಅತೀ ಕಿರಿಯ ವಯಸ್ಸಿನಲ್ಲೆ ಸ್ವಂತ ಕಚೇರಿಯಲ್ಲಿ ಕಾನೂನು ವೃತ್ತಿ  ಆರಂಭಿಸಿದರು. ವಕೀಲರಾದ ಉಷಾ ಮನೋರಾಜ್ ರವರನ್ನು 2005 ರಲ್ಲಿ ವಿವಾಹವಾಗಿ ದಾಂಪತ್ಯ ಜೀವನ ಆರಂಭಿಸಿದರು. ಪ್ರಸ್ತುತ ಇವರು ಮಂಗಳೂರಿನಲ್ಲಿ ಪತ್ನಿ ಮತ್ತು ಮಗಳು ದಿಯಾರೊಂದಿಗೆ ವಾಸವಿದ್ದು ಸ್ವಂತ ಕಚೇರಿ ಹೊಂದಿದ್ದಾರೆ.

ಇವರು ಮಂಗಳೂರಿನ ಪ್ರಭಾವಿ ವಕೀಲರಲ್ಲಿ ಒಬ್ಬರಾಗಿದ್ದು, ಅನೇಕ ಕಾನೂನು ವಿಚಾರ ಸಂಕಿರಣಗಳಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿತರು. ಪೋಲಿಸ್ ಇಲಾಖೆ, ಧಾರ್ಮಿಕ ಮತ್ತು ದತ್ತಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ  ಮುಂತಾದ ಸರ್ಕಾರಿ ಇಲಾಖೆಗಳಿಗೆ ಕಾನೂನು ಸಲಹೆ ಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆಗಳು, ಕ್ರೀಡಾ ಸಂಸ್ಥೆಗಳು , ಮತ್ತು ಪ್ರಮುಖ ದೇವಸ್ಥಾನಗಳು, ಮೆಡಿಕಲ್ ಕೌನ್ಸಿಲ್ , ಖಾಸಗಿ ಕಂಪೆನಿಗಳು, ವಿವಿಧ ಸಮಾಜ ಸೇವೆ ಸಂಸ್ಥೆಗಳು ಮತ್ತು ಮಂಗಳೂರಿನ ಬಹುರಾಷ್ಟ್ರೀಯ ಕಂಪೆನಿಗಳ  ಖಾಸಗಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.                                           

ಇವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಕಚ್ಚೂರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿ, ಮಂಗಳೂರು ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿ ಮತ್ತು ಕಚ್ಚೂರು ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರಾಗಿ ತಮ್ಮ ಸೇವೆ  ಸಲ್ಲಿಸಿರುತ್ತಾರೆ. ಇವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ವಕಾಲತ್ತು ಆರಂಭಿಸಿದವರು ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಉನ್ನತ ಹುದ್ದೆಗೇರಿದವರಲ್ಲಿ ಭಂಡಾರಿ ಸಮುದಾಯದ ಹಲವರು ಇರುವುದು ಸಂತಸದ ವಿಚಾರವಾಗಿದೆ.                                                                                             

ಇವರ ಸಂಚಾಲಕತ್ವದಲ್ಲಿ ಭಂಡಾರಿ ಯೂತ್ ವಾರಿಯರ್ಸ್ ಎಂಬ ಸೇವಾ ಸಂಸ್ಥೆ ಸಮಾಜ ಸೇವಾ ಕಾರ್ಯದಲ್ಲಿ ನಿರತವಾಗಿದ್ದು , ಭಂಡಾರಿ ವಾರ್ತೆ ಅಂತರ್ಜಾಲ ಪತ್ರಿಕೆಯ ಕಾನೂನು ಸಲಹೆಗಾರರಾಗಿ ಕೂಡ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತ ಮನೋರಾಜ್ ರಾಜೀವ ರವರಿಗೆ ದೇವರ ಆಶೀರ್ವಾದದಿಂದ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಹುದ್ದೆ ನಿಭಾಯಿಸುವ ಅವಕಾಶ ಸಿಗಲಿ ಮತ್ತು ಕೈಗೆತ್ತಿಕೊಂಡಿರುವ ಕಾರ್ಯಗಳು ಸುಖಮಯವಾಗಿ ನಡೆಯಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಆಶಿಸುತ್ತದೆ. 

-ಭಂಡಾರಿ ವಾರ್ತೆ                                                                                                                                                                                                                                                                                                               
Mr. Manoraj Rajeeva re-appointed as Government pleader Dakshina Kannada.                                                                                                                                                                    

Mr. Manoraj Rajeeva senior advocate from Mangaluru is selected as Dakshina Kannada district Government pleader for the second term with effect from 2/2/2018. Mr Manoraj Rajeeva is the son of Mrs Jalajakshi and Shri Rajeeva Kelasi, Ex Deputy Controller of State Account Karnataka.

Mr. Manoraj Rajeeva is the legal adviser consultant for reputed organizations business houses social service organizations private and public sector business companies in Mangaluru. He served as vice-President of Bhandary Samaja Sangha Mangaluru, he’s a active member in the Utsava and Brahma Kalasa committee in the year 2006. He was the founder Director of Kachuru credit co-operative society Mangaluru.

Recently he was appointed as the head of social service organization Bhandary YouthWarriors. He’s the legal advisor consultant for BhandaryVaarthe E-Paper. Mr. Manoraj Rajeeva is residing at Mangaluru with wife Usha Manoraj, advocate and daughter Miss Diya Manoraj.                                                                                                                                               

We on behalf of BhandaryVaarthe team and readers wish him Good luck in his next tenure in the office.

 – BV

1 thought on “ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಮತ್ತೊಂದು ಅವಧಿಗೆ ಮರು ನೇಮಕ

Leave a Reply

Your email address will not be published. Required fields are marked *