January 19, 2025
narayana-1
ಮಂಗಳೂರಿನ ಕುಳಾಯಿ ಹೊನ್ನಕಟ್ಟೆ ನಾರಾಯಣ ಭಂಡಾರಿ (81 ವರ್ಷ) ಇವರು ದಿನಾಂಕ 12-05-2018 ಶನಿವಾರ ಮುಂಜಾನೆ ಅಲ್ಪ ಕಾಲದ ಆಸೌಖ್ಯ ದಿಂದ ನಿಧನರಾದರು .
ಇವರು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು ಕುಳಾಯಿ ಗ್ರಾಮ ಪಂಚಾಯತ್  ಸದಸ್ಯರಾಗಿ ಆಯ್ಕೆಯಾಗಿ ಜನ ಸೇವೆ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ಧರು. ಸುರತ್ಕಲ್ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ರಾಗಿ ಸೇವೆ ಸಲ್ಲಿಸಿದ್ದರು. 
ಕುಳಾಯಿ ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಮಾರ್ಗದರ್ಶಕರಾಗಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾರಾಯಣ ಭಂಡಾರಿ  ಯವರಿಗೆ ಪತ್ನಿ ಸೀತಾ ಪುತ್ರರಾದ ಮಾಧವ ಭಂಡಾರಿ ಮತ್ತು ಶ್ರೀ ನಾಗೇಶ್ವರ ಎಲೆಕ್ಟ್ರಿಕಲ್ ಮತ್ತು ಸೌಂಡ್ ಸಿಸ್ಟಮ್ ನ ಸುಕುಮಾರ್ ಭಂಡಾರಿ ,ಕುಳಾಯಿ ಪುತ್ರಿಯರಾದ ಜಯಂತಿ ವಾಸುದೇವ ಭಂಡಾರಿ ಉಡುಪಿ , ವನಜ ಸುಧಾಕರ ಭಂಡಾರಿ ಬೈಕಂಪಾಡಿ ಮತ್ತು ಪದ್ಮಾಕ್ಷಿ ಆನಂದ ಭಂಡಾರಿ ಕುಳಾಯಿ ಹೀಗೆ ಒಟ್ಟು ಐದು ಜನ ಮಕ್ಕಳು  ಸೊಸೆ ಯಂದಿರಾದ ವಿಜಯ ಮಾಧವ ಭಂಡಾರಿ  ಮತ್ತು ವಿಜಯಲಕ್ಷ್ಮೀ  ಸುಕುಮಾರ್ ಭಂಡಾರಿ  ಆಳಿಯ ವಾಸುದೇವ ಭಂಡಾರಿ ಉಡುಪಿ ಹಾಗೂ ಮೊಮ್ಮಕ್ಕಳಾದ ಹರಿಪ್ರಸಾದ್ , ಲೋಹಿತ್  , ಮೋನಿಷ , ಬ್ರಿಜೇಶ್, ಆತಿಶ್ , ಜಯಪ್ರಕಾಶ್,  ಯಕ್ಷಿತಾ ಹಾಗೂ ಅಪಾರ ಬಂದು ಮಿತ್ರರನ್ನು  ಅಗಲಿದ್ದಾರೆ .
ಶ್ರೀ ದೇವರು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಟ್ಟು, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
Advt.
-ಭಂಡಾರಿವಾರ್ತೆ.
 

Leave a Reply

Your email address will not be published. Required fields are marked *