
ಉಡುಪಿ ಬೈಲೂರು ಪಟೇಲ್ ಹೌಸ್ ಶ್ರೀಮತಿ ಶಾರದಾ ಎನ್.ಭಂಡಾರಿ ಮತ್ತು ದಿವಂಗತ
ಶ್ರೀ ನಿತ್ಯಾನಂದ ಭಂಡಾರಿ ದಂಪತಿಯ ಪುತ್ರ
ಚಿ॥ ನಿತಿನ್ ಕುಮಾರ್
ಪಡುಬಿದ್ರೆ ಶ್ರೀಮತಿ ಪ್ರಭಾ ಆರ್. ಭಂಡಾರಿ ಮತ್ತು ಶ್ರೀ ರಮೇಶ್ ಭಂಡಾರಿ ದಂಪತಿಯ ಪುತ್ರಿ
ಚಿ॥ ಸೌ॥ ಹರಿಕೃಪಾ
ಇವರ ಶುಭ ವಿವಾಹವು ಕಟೀಲು ದುರ್ಗಾಪರಮೇಶ್ವರಿ ದೇವಿಯ ಸನ್ನಿದಾನದಲ್ಲಿ ದಿನಾಂಕ 26/02/2020 ನೇ ಬುಧವಾರದಂದು ದೇವಿಯ ಸಮ್ಮುಖದಲ್ಲಿ ಆಪ್ತ ಬಂಧುಗಳ ಉಪಸ್ಥಿತಿಯಲ್ಲಿ ನೆರವೇರಿತು.
ಮದುವೆಯ ಆರತಕ್ಷತೆಯು ಅದೇ ದಿನ ಮದ್ಯಾಹ್ನ ಹೆಜಮಾಡಿ ಬಿಲ್ಲವರ ಸಂಘ ಜಯ ಸಿ. ಸುವರ್ಣ ಸಭಾಂಗಣದಲ್ಲಿ ಬಂದು ಮಿತ್ರರು ಕುಟುಂಬಸ್ಥರು ಹಿತೈಷಿಗಳ ಆಗಮನದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.







ನವದಂಪತಿಗಳಿಗೆ ಭಗವಂತನು ಚಿರಕಾಲ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ಆರೋಗ್ಯವಂತ ಸಂಸಾರವನ್ನು ಮುನ್ನಡೆಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಹಾರೈಸುತ್ತದೆ .
-ಭಂಡಾರಿ ವಾರ್ತೆ