
ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಸೇನೆಕೋಡಿಯ ಸಮಾಜಿಕ ಕಾರ್ಯಕರ್ತ , ಭಾರತೀಯ ಜನತಾ ಪಕ್ಷದ ಬಂಟ್ವಾಳ ಕ್ಷೇತ್ರ ಸಮಿತಿಯ ಸದಸ್ಯ ಶ್ರೀ ಜಗದೀಶ್ ಭಂಡಾರಿ ಹರೇಕಳ ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿಯವರ ಸುಪುತ್ರ ಹಾಗೂ ಕಲ್ಲಡ್ಕ ವಿಜಯ ಬ್ಯಾಂಕ್ ಸೀನಿಯರ್ ಮ್ಯಾನೇಜರ್
ಚಿ॥ ಪ್ರಣಾಮ್ ಕುಮಾರ್
ಬಂಟ್ವಾಳ ತಾಲೂಕು ಕೇಪು ಮೈರ ಶ್ರೀ ವಿಶ್ವನಾಥ್ ಭಂಡಾರಿ ಕೊಡಂಕೂರು ಉಡುಪಿ ಮತ್ತು ಶ್ರೀಮತಿ ವಿನಯ ವಿಶ್ವನಾಥ್ ಭಂಡಾರಿ ಕೊಡಂಕೂರು ಉಡುಪಿ ದಂಪತಿ ಸುಪುತ್ರಿ ಹಾಗೂ ವಿಪ್ರೋ ಸಂಸ್ಥೆಯ ಪೂನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ಚಿ॥ಸೌ॥ ಮೇಘನಾ


ಇವರ ಶುಭ ವಿವಾಹವು ಫೆಬ್ರವರಿ ದಿನಾಂಕ 16 ನೇ ಆದಿತ್ಯವಾರ ದಂದು ಉಡುಪಿ ಮಿಷನ್ ಕಂಪೌಂಡ್ ” ಬಾಸೆಲ್ ಮಿಸನರೀಸ್ ಮೆಮೋರಿಯಲ್ ಅಡಿಟೋರಿಯಂ “ ಹಾಲ್ ಬಹಳ ವಿಜೃಂಭಣೆಯಿಂದ ಕುಟುಂಬಸ್ಥರು, ಬಂದು ಮಿತ್ರರು, ಹಿತೈಷಿಗಳು , ಸಹೋದ್ಯೋಗಿಗಳ ಶುಭ ಆಶೀರ್ವಾದಗಳೊಂದಿಗೆ ನವದಂಪತಿಗಳಾಗಿ ನೆರೆದಿದ್ದ ಸಾವಿರಾರು ಜನರ ಸಂಭ್ರಮಕ್ಕೆ ಸಾಕ್ಷಿಯಾದ್ದರು.





ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಚಿರಕಾಲ ಪ್ರೀತಿ- ಅನೋನ್ಯತೆ, ಸುಖ-ಶಾಂತಿ ಆಯುರಾರೋಗ್ಯ ಆಯುಷ್ಯ ಸಕಲ ಐಶ್ವರ್ಯ ಸಹಿತ ದಾಂಪತ್ಯ ಜೀವನ ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ