

ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಕೋಶಾಧಿಕಾರಿ ಪ್ರಸಾದ್ ಪುತ್ತೂರು ರವರು ಪರಿಶ್ಮಾರನ್ನು ವರಿಸುವುದರೊಂದಿಗೆ ಶಾಸ್ತ್ರೋಕ್ತವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದರು.
ಪುತ್ತೂರು ತಾಲೂಕಿನ ಖಜಾನೆಮೂಲೆ ಸಂಪ್ಯದ ಶ್ರೀ ಸಂಕಪ್ಪ ಭಂಡಾರಿ ಮತ್ತು ಶ್ರೀಮತಿ ಗಿರಿಜಾ ಸಂಕಪ್ಪ ಭಂಡಾರಿ ದಂಪತಿಯ ತೃತೀಯ ಪುತ್ರ…
ಚಿ|| ಪ್ರಸಾದ್ ಭಂಡಾರಿ.
ಮತ್ತು ಮುಂಡ್ಕೂರು ಗೋಕುಲ ನಗರದ ದರ್ಖಾಸುಮನೆ ಶ್ರೀ ಕೊರಗಪ್ಪ ಭಂಡಾರಿ ಮತ್ತು ಶ್ರೀಮತಿ ವಿಜಯಾ ಕೊರಗಪ್ಪ ಭಂಡಾರಿಯವರ ದ್ವಿತೀಯ ಪುತ್ರಿ…
ಚಿ||ಸೌ|| ಪರಿಶ್ಮಾ.
ಇವರ ವಿವಾಹವು ಮೇ 2 ರ ಬುಧವಾರ ಪುತ್ತೂರು ಸಾಲ್ಮರ ಕೋಟೇಚಾ ಹಾಲ್ ನಲ್ಲಿ ವಿಜೃಂಭಣೆಯಿಂದ ನೆರವೇರಿತು.
ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಪಾರ ಸಂಖ್ಯೆಯ ಬಂಧು ಮಿತ್ರರು, ಕುಟುಂಬಸ್ಥರು, ಸಹೋದ್ಯೋಗಿಗಳು, ಆತ್ಮೀಯರು ನವವಧುವರರಿಗೆ ಹರಸಿ ಹಾರೈಸಿದರು.
ನವ ಬಾಳಿಗೆ ನವ ಕನಸುಗಳೊಂದಿಗೆ ಅಡಿಯಿಟ್ಟ ನವಜೋಡಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯಿಂದ ಹಾರ್ದಿಕ ಅಭಿನಂದನೆಗಳು.ಭಗವಂತನು ನಿಮ್ಮ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ ಆಶೀರ್ವದಿಸಲಿ…
-ಭಂಡಾರಿವಾರ್ತೆ.