January 18, 2025
shruthi wedding1
ಮಂಗಳೂರು ಅಳಪೆಯ ಶ್ರೀ ಸುರೇಶ್.ಜಿ. ಮತ್ತು ಶ್ರೀಮತಿ ಮಂಜುಳಾ ಸುರೇಶ್ ದಂಪತಿಯ ದ್ವಿತೀಯ ಪುತ್ರಿ…
ಚಿ||ಸೌ|| ಶ್ರುತಿ
ಮತ್ತು
ಬಾಳೇಹೊನ್ನೂರು ಶ್ರೀ ಶುಭಕರ ಬಸರವಳ್ಳಿ ಮತ್ತು ಶ್ರೀಮತಿ ಶ್ರೀಮತಿ ಶುಭಕರ ದಂಪತಿಯ ಪ್ರಥಮ ಪುತ್ರ…
ಚಿ|| ಶರತ್.
ಇವರ ವಿವಾಹ ಮಹೋತ್ಸವವು ಶ್ರೀ ಗುರುದೇವತಾನುಗ್ರಹದಿಂದ ಕಡ್ಲೆಮಕ್ಕಿ ಬಾಳೇಹೊನ್ನೂರು “ಒಕ್ಕಲಿಗರ ಕಲ್ಯಾಣ ಮಂಟಪ” ದಲ್ಲಿ ನವೆಂಬರ್ 1, 2018 ರ ಗುರುವಾರ ಅತೀ ವಿಜೃಂಭಣೆಯಿಂದ ನೆರವೇರಿತು.

ಈ ವಿವಾಹ ಸಮಾರಂಭದಲ್ಲಿ ಮಂಗಳೂರು ಅಳಪೆಯ, ಬಾಳೇಹೊನ್ನೂರಿನ, ಶಿರಾಳಕೊಪ್ಪದ ಭಂಡಾರಿ ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಮತ್ತು ಅಸಂಖ್ಯ ಭಂಡಾರಿ ಬಂಧುಗಳು ಉಪಸ್ಥಿತರಿದ್ದು, ಯಥೋಚಿತ ಸತ್ಕಾರ ಸ್ವೀಕರಿಸಿ, ನವವಧುವರರನ್ನು ಹಾರೈಸಿ, ಆಶೀರ್ವದಿಸಿದರು.

ಗುರುವಾರದ ಶುಭದಿನದಂದು ಧನುರ್ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನೂತನ ವಧುವರರಾದ ಶ್ರುತಿ-ಶರತ್ ರಿಗೆ ಶ್ರೀ ದೇವರು ಸಕಲಷ್ಠೈಶ್ವರ್ಯಗಳನ್ನೂ ಅನುಗ್ರಹಿಸಿ, ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ನೂತನ ದಂಪತಿಗಳಿಗೆ ಭಂಡಾರಿವಾರ್ತೆ ತಂಡದಿಂದ ಹಾರ್ದಿಕ ಶುಭ ಕಾಮನೆಗಳು…
-ಭಂಡಾರಿವಾರ್ತೆ.

1 thought on “ಮಂಗಳೂರು ಅಳಪೆಯ ಶ್ರುತಿ ಮತ್ತು ಬಾಳೆಹೊನ್ನೂರಿನ ಶರತ್ ವಿವಾಹ ಸಂಭ್ರಮ.

  1. ನೂತನ ವಧು-ವರರಿಗೆ ದಾಂಪತ್ಯ ಜೀವನದ ಶುಭಹಾರೈಕೆಗಳು. ಕಚ್ಚೂರು ನಾಗೇಶ್ವರ ಅವರ ಸಕಲೈಶ್ವರ ನೀಡಿ ಕಾಪಾಡಲಿ.

Leave a Reply

Your email address will not be published. Required fields are marked *