
ಭಂಡಾರಿ ಸಮಾಜ ಸಂಘ
ಬಾಳೆಹೊನ್ನೂರು
ನೂತನ ಪದಾಧಿಕಾರಿಗಳ ಆಯ್ಕೆ
ಅಕ್ಟೋಬರ್ 9 ರಂದು ನಡೆದ ಭಂಡಾರಿ ಸಮಾಜ ಸಂಘದ ಸಭೆಯಲ್ಲಿ ಬಾಳೇಹೊನ್ನೂರಿನ ಶ್ರೀ ಸುನಿಲ್ ರಾಜ್ ಭಂಡಾರಿಯವರು ಭಂಡಾರಿ ಸಮಾಜ ಸಂಘ ಬಾಳೇಹೊನ್ನೂರು ಘಟಕದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಶ್ರೀಮತಿ ಶೃತಿ ಪ್ರಭಾಕರ ಭಂಡಾರಿ, ಉಪಾಧ್ಯಕ್ಷರಾಗಿ ಶ್ರೀ ಪ್ರಕಾಶ್ ಭಂಡಾರಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಹಿರಿಯಣ್ಣ ಭಂಡಾರಿ, ಭಂಡಾರಿ ಸಮಾಜ ಸಂಘದ ಹಾಲಿ ಅದ್ಯಕ್ಷರಾದ ಶ್ರೀ ಮೋಹನ್ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಧುಸೂದನ್ ಭಂಡಾರಿ, ಶ್ರೀಮತಿ ಸವಿತಾ ಅನಿಷ್, ಭಂಡಾರಿ ಸಮಾಜದ ಶೈಕ್ಷಣಿಕ ಪ್ರತಿನಿಧಿ ಶ್ರೀ ಆನಂದ್ ಭಂಡಾರಿ, ಶ್ರೀ ನಾಗೇಶ್ವರ ಸ್ವಸಹಾಯ ಸಂಘದ ಸದಸ್ಯರು, ಭಂಡಾರಿ ಸಮಾಜದ ಪ್ರಮುಖರಾದ ಶ್ರೀ ಅಶೋಕ್ ಭಂಡಾರಿ, ಶ್ರೀ ಅನಿಲ್ ಭಂಡಾರಿ, ಶ್ರೀಮತಿ ಮಾಲತಿ ಅರುಣ್, ಶ್ರೀಮತಿ ವಸಂತಿ ಭಂಡಾರಿ, ಬಾಳೇಹೊನ್ನೂರು JCI ನ ಅಧ್ಯಕ್ಷರಾದ ಶ್ರೀ ಮನು ಕುಮಾರ್ ಮತ್ತು ಭಂಡಾರಿ ಸಮಾಜ ಸಂಘ, ಬಾಳೇಹೊನ್ನೂರು ಘಟಕದ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ : ಗಣೇಶ್ ಭಂಡಾರಿ. ಬೇಲೂರು.