January 18, 2025
vijaya and pooja

ಕೊರ್ಗಿ ಜಯಕರ ಭಂಡಾರಿಯವರ ಅಳಿಯ, ಹೊಂಬಾಡಿಯ ಕಾರ್ಕಳ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಸರೋಜ ರಮೇಶ್ ಭಂಡಾರಿ ಯವರ ಪುತ್ರ..
ಚಿ|| ವಿಜಯ ಭಂಡಾರಿ.
ಕಳತ್ತೂರು ನಾರಾಯಣ ಭಂಡಾರಿಯವರ ಸೊಸೆ, ಎಡ್ಮೇರು ತೋಟದಮನೆ ಶ್ರೀ ಅಪ್ಪು ಭಂಡಾರಿ ಮತ್ತು ಶ್ರೀಮತಿ ಸರೋಜಿನಿ ಅಪ್ಪು ಭಂಡಾರಿಯವರ ಪ್ರಥಮ ಪುತ್ರಿ.
ಚಿ||ಸೌ|| ಪೂಜಾಶ್ರೀ.


ಇವರ ವಿವಾಹ ಸಮಾರಂಭವು ಗುರುದೇವತಾನುಗ್ರಹದಿಂದ ಜೂನ್ 25 ರ ಸೋಮವಾರ ಕೋಟೇಶ್ವರದ ರಥಬೀದಿಯ ಶ್ರೀ ವಾದಿರಾಜ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಟುಂಬ ವರ್ಗದವರು, ಆತ್ಮೀಯರು, ಹಿತೈಷಿಗಳು ಮತ್ತು ಹೊಂಬಾಡಿಯ ನಾಗಯಕ್ಷಿ ಯುವ ವೇದಿಕೆಯ ಸರ್ವ ಸದಸ್ಯರು ನವವಧುವರರಿಗೆ ಶುಭ ಹಾರೈಸಿ ಆಶೀರ್ವದಿಸಿದರು.

ನವ ಬಾಳಿಗೆ ಪಾದಾರ್ಪಣೆಗೈದ ನವಜೋಡಿಗೆ ಶ್ರೀ ದೇವರು ಸಕಲಷ್ಠೈಶ್ವರ್ಯಗಳನ್ನೂ ದಯಪಾಲಿಸಿ ಮಂಗಳವನ್ನುಂಟುಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

 

 

 

 

ವರದಿ: ಸಾತ್ವಿಕ್ ಭಂಡಾರಿ ಹುಣ್ಸೇಮಕ್ಕಿ.

Leave a Reply

Your email address will not be published. Required fields are marked *