January 18, 2025
poovari
Advt.

ಪುತ್ತೂರು: ಪುತ್ತೂರು ತುಳುಕೂಟದ ಅಧ್ಯಕ್ಷ, ತುಳು ಕವಿ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಇವರು ‘ಪೂವರಿ’ ತುಳು ಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ತುಳು ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ವಿಶೇಷ ಸೇವೆಯನ್ನು ಪರಿಗಣಿಸಿ ತುಳುವೆರೆಂಕುಲು ಬೆಂಗಳೂರು ಕೂಟವು ಬೆಂಗಳೂರಿನ ಎಂ ಜಿ ರಸ್ತೆ ಅಜಂತಾ ಹೋಟೆಲ್ ನ ರೋಹಿಣಿ ಸಭಾಂಗಣದಲ್ಲಿ ನಡೆದ ಬಿಸು ಪರ್ಬ ಮತ್ತು ವಸಂತೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಸಮಾರಂಭದಲ್ಲಿ ತುಳುವೆರೆಂಕುಲು ಬೆಂಗಳೂರು ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಕುಲಶೇಖರ, ಪ್ರಧಾನ ಕಾರ್ಯದರ್ಶಿ ಜಲಜಾ ಶೇಖರ್, ಬೆಂಗಳೂರು ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾದ್ಯಾಯ, ವಿದ್ವಾಂಸ ಪ್ರೋ ಕೆ.ಪಿ ಪುತ್ತೂರಾಯ, ಪಿ. ಸಿ ರಾವ್ , ಸಂಘದ ಖಜಾಂಚಿ ಪಿ .ಎನ್ ವಿಷ್ಣುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Advt.
ಸನ್ಮಾನಿತಗೊಂಡ ನಮ್ಮ ಹೆಮ್ಮೆಯ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಅಭಿನಂದಿಸುತ್ತದೆ
Report: Kushal Bangalore

Leave a Reply

Your email address will not be published. Required fields are marked *