January 18, 2025
Vinod2
ಮಂಗಳೂರು ಸ್ಕೌಟ್ಸ್ ಭವನದಲ್ಲಿ ರಾಜ್ಯ ಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಮಾಸ್ಟರ್ ವಿಭಾಗ ದಲ್ಲಿ 74 ಕೆಜಿ ದೇಹ ತೂಕದ ವಿಭಾಗದಲ್ಲಿ ಕ್ರೀಡಾಪಟು ಹಾಗೂ ಪವರ್ ಲಿಫ್ಟರ್ ವಿನೋದ್ ಕುಮಾರ್ ಮಣ್ಣಗುಡ್ಡೆ ತೀವ್ರ ಸ್ಪರ್ಧೆ ನೀಡಿ ಬೆಳ್ಳಿ ಪದಕ ಪಡೆದಿದ್ದಾರೆ .
ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸಾಧನೆ ಮಾಡಿರುವ ವಿನೋದ್ ಕುಮಾರ್ ರವರು  ಭಾರತೀಯ ಜೀವ ವಿಮಾ ನಿಗಮದ ಮಂಗಳೂರು ಜೈಲ್ ರಸ್ತೆಯ ಶಾಖೆ 2 ರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಶ್ರೀಲಂಕಾ ದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಆಟೋಟ ಸ್ಪರ್ಧೆ ಯಲ್ಲಿ ಭಾಗವಹಿಸಿ 400 ಮೀಟರ್ ಮತ್ತು 3000 ಮೀಟರ್ ಸ್ಪರ್ಧೆಯ ಪದಕ  ವಿಜೇತರಾಗಿದ್ದರು ಜೇಮ್ಸ್ ಸೆಡ್ ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಹಾಗೂ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಜಿಮ್ ಸ್ಪರ್ಧೆಯಲ್ಲಿ ಬಂಗಾರದ ಪದಕ  ವಿಜೇತರು. ಬಾಲ್ಯ ಜೀವನದಲ್ಲಿ ಉತ್ತಮ ಕರಾಟೆ ಪಟು ಆಗಿದ್ದರು.  ಭಾರತೀಯ ಜೀವ ವಿಮಾ ನಿಗಮ ತಂಡದ ಕ್ರೀಡಾಪಟುವಾಗಿಯೂ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿರುವ ಇವರು ಅನೇಕ ಪದಕಗಳನ್ನು ಪಡೆದಿದ್ದಾರೆ. 5 ಕಿ.ಮೀಟರ್ ಮತ್ತು 10 ಕಿ.ಮೀಟರ್ ಓಟದ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದಾರೆ.
ಶಬರಿ ಮಲೆ ಅಯ್ಯಪ್ಪ ಸ್ವಾಮಿ ಪರಮ ಭಕ್ತರಾಗಿರುವ ವಿನೋದ್ ಮಂಗಳೂರಿನಿಂದ ಹತ್ತು ಬಾರಿ ಮತ್ತು ಕಟೀಲು ಕ್ಷೇತ್ರದಿಂದ ಒಂದು ಬಾರಿ ಹಾಗೂ ಕೊಲ್ಲೂರು ಕ್ಷೇತ್ರದಿಂದ ಒಂದು ಬಾರಿ ಪಾದ ಯಾತ್ರೆಯನ್ನು  ಶಬರಿ ಮಲೆ ಅಯ್ಯಪ್ಪ ಸನ್ನಿಧಾನಕ್ಕೆ  ಮಾಡಿದ್ದಾರೆ.  ವಿನೋದ್ ಕುಮಾರ್ ಮಣ್ಣಗುಡ್ಡೆ ದಿ॥ ಶ್ರೀ  ಕೆ.ಕೆ.ಭಂಡಾರಿ ಮತ್ತು ಶ್ರೀಮತಿ ಭವಾನಿ ಟೀಚರ್ ದಂಪತಿಯ ಪುತ್ರ ಮಂಗಳೂರು ಬಿಜ್ಯೆ  ಕಾಫಿ ಕಾಡ್ ಕೊಟ್ಟಾರ ಕ್ರಾಸ್ ನಲ್ಲಿ ಪತ್ನಿ ಶ್ರೀಮತಿ ಸುಜಯ ವಿನೋದ್  ಎಮ್.ಬಿ.ಎ.ಪದವಿ ಪಡೆದ ಪುತ್ರ  ಮಾ॥ಅಜು೯ನ್, ವಿನೋದ್ ಹಾಗೂ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.  ಇವರು ಕ್ರೀಡಾ ಕ್ಷೇತ್ರದಲ್ಲಿ  ಇನ್ನಷ್ಟು  ಸಾಧನೆ ಮಾಡುವ ಶಕ್ತಿ ,ಆರೋಗ್ಯ, ಆಯುಷ್ಯ, ನೆಮ್ಮದಿಯ ,ಸುಖ, ಸಂಪತ್ತನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
Advt.
advt.
-ಭಂಡಾರಿ ವಾತೆ೯

Leave a Reply

Your email address will not be published. Required fields are marked *