January 18, 2025
savitha hariram

ಡುಪಿ ನಗರ ಸಭೆಗೆ ಅಗಸ್ಟ್ 31 ರಂದು ನಡೆದ ಚುನಾವಣೆಗೆ ಬನ್ನಂಜೆ 28 ನೇ ವಾಡ್೯ ನಿಂದ ಸವಿತಾ ಹರೀಶ್ ರಾಮ್ ಉಡುಪಿ ನಗರ ಸಭೆಯ ಚುನಾವಣೆಯಲ್ಲಿ ಸ್ಪಧಿ೯ಸಿ ಸಪ್ಟೆಂಬರ್ 3 ರಂದು ನಡೆದ ಎಣಿಕೆಯಲ್ಲಿ ಅತ್ಯಧಿಕ ಮತಗಳಿಂದ ವಿಜಯದ ನಗೆ ಬೀರಿದ್ದಾರೆ.


ಸಮಾಜ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಉಡುಪಿ ನಗರ ಸಭೆಯ ನಿಕಟಪೂವ೯ ಸದಸ್ಯ ಹರೀಶ್ ರಾಮ್ ಭಂಡಾರಿ ಯವರ ಪತ್ನಿ ಸವಿತಾ ಹರೀಶ್ ರಾಮ್ .

ಬನ್ನಂಜೆ ವಾಡ್೯ ಬಿ.ಜೆ.ಪಿ. ಪಕ್ಷದ ಸ್ಥಾನೀಯ ಕಾಯ೯ಕತೆ೯ಯಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಹಿಳಾ ಘಟಕದ ಸಕ್ರಿಯ ಸದಸ್ಯೆಯಾಗಿ ಸಮಾಜ ಎಲ್ಲಾ ಕಾಯ೯ ಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಉಡುಪಿ ನಗರ ಸಭೆಯ ಮುಖಾಂತರ ತನ್ನ ವಾಡ್೯ನ ಜನರ ಮೂಲ ಸೌಕರ್ಯಕ್ಕೆ ಸ್ಪಂದಿಸಿ ಮತ್ತು ಹೆಚ್ಚಿನ ಅಭಿವೃದ್ಧಿ ಕೆಲಸವನ್ನು ಮಾಡುವ ಹುಮ್ಮಸ್ಸುನಿಂದ ಚುನಾವಣೆಗೆ ಸ್ಪಧಿ೯ಸಿದ್ದರು ಸವಿತಾ ಹರೀಶ್ ರಾಮ್ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ. 
ಸವಿತಾ ಹರೀಶ್ ರಾಮ್ ರವರ ದೂರವಾಣಿ ಸಂಖ್ಯೆ
9900410665

ಭಂಡಾರಿ ವಾತೆ೯

Leave a Reply

Your email address will not be published. Required fields are marked *