January 18, 2025
Dr.Bhagya 1

ವೈದ್ಯಕೀಯ  ಕ್ಷೇತ್ರದ ಮೂಲಕ  ಸಮಾಜಕ್ಕೆ  ಉತ್ತಮ  ಸೇವೆ ಮಾಡಬೇಕೆಂಬ ಕನಸು ಕಟ್ಟಿ ಕೊಂಡಿರುವ ಭಂಡಾರಿ ಸಮಾಜದ ಪ್ರತಿಭೆಗಳ ಸಾಲಿಗೆ ಇನೊಬ್ಬರು ಸೇರ್ಪಡೆಯಾಗಿದ್ದಾರೆ, ಅವರೇ  ಉಡುಪಿ ತಾಲೂಕಿನ ಚಿಟ್ಪಾಡಿ ಯ  ಶ್ರೀ  ನವೀನ್ ಭಂಡಾರಿ ಮತ್ತು ಶ್ರೀಮತಿ  ವಿನೋದ  ನವೀನ್ ಭಂಡಾರಿ  ದಂಪತಿಯ ಪುತ್ರಿ 

ಡಾ॥ ಭಾಗ್ಯ ಎನ್.ಭಂಡಾರಿ

ಕಳೆದ  ಬಾರಿಯ  ಎಮ್.ಬಿ.ಬಿ.ಎಸ್‌.ಪರೀಕ್ಷೆಯಲ್ಲಿ  ಅತ್ಯುತ್ತಮ  ಅಂಕಗಳೊಂದಿಗೆ ವೈದ್ಯಕೀಯ ಶಿಕ್ಷಣ ಪದವಿಯನ್ನು ಪಡೆದಿರುವ   ಡಾ॥ ಭಾಗ್ಯ ರವರು ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಉಡುಪಿ  ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ  ಅತ್ಯುನ್ನತ  ಶ್ರೇಣಿಯೊಂದಿಗೆ ಪಿ.ಯು. ಶಿಕ್ಷಣವನ್ನು ಪಡೆದು  ಮಂಗಳೂರಿನ  ಪ್ರತಿಷ್ಠಿತ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಮ್.ಬಿ.ಬಿ.ಎಸ್‌ ಪದವಿ ಶಿಕ್ಷಣವನ್ನು ಅತ್ಯುತ್ತಮ ಅಂಕಗಳೊಂದಿಗೆ ಪೂರೈಸಿದ್ದಾರೆ ಹಾಗೂ  ಎ.ಜೆ.ಆಸ್ಪತ್ರೆಯಲ್ಲಿ  ವೈದ್ಯಕೀಯ ತರಬೇತಿಯನ್ನು ಮುಗಿಸಿದ್ದಾರೆ.

ಡಾ॥ ಭಾಗ್ಯ ರವರ ತಂದೆ ಶ್ರೀ ನವೀನ್ ಭಂಡಾರಿ ಉಡುಪಿಯ ಉತ್ತಮ  ರಾಜಕಾರಣಿ  ಹಾಗೂ ಉದ್ಯಮಿ ಮತ್ತು ಉಡುಪಿ  ನಗರಸಭೆಯ ಸ್ಥಾಯಿ ಸಮಿತಿಯ  ಮಾಜಿ ಅಧ್ಯಕ್ಷ ಹಾಗೂ ಮಾಜಿ ಸದಸ್ಯ.

ಡಾ॥ ಭಾಗ್ಯ ಇವರ ಸಹೋದರ  ಶ್ರೀ ಗೌರವ್ ಉದ್ಯಮಿ ಮತ್ತು ಭಂಡಾರಿ ಸಮಾಜ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಡಾ॥ ಭಾಗ್ಯ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮಾಡುವ ಅವಕಾಶ ಕಲ್ಪಿಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *