January 19, 2025
WhatsApp Image 2022-02-20 at 14.31.18 (1)

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್ ಪೆಕ್ಟರ್ ಆಗಿ 2020 ರಲ್ಲಿ ಆಯ್ಕೆಯಾದ ಬಂಟ್ವಾಳ ತಾಲ್ಲೂಕಿನ ಸೊರ್ನಾಡು ಬಂಡಸಾಲೆಯ ಕು॥ನಿಧಿ ಬಿ.ಎನ್. ಕರ್ತವ್ಯದ 11 ತಿಂಗಳ ತರಬೇತಿ ಅವಧಿಯನ್ನು ಕಲಬುರಗಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಡೆಯುವ ಸಂದರ್ಭದಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಮತ್ತು ಮಹಿಳಾ ಹೊರಾಂಗಣ ವಿಭಾಗದ ಅತ್ಯುತ್ತಮ ನಿರ್ವಹಣ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಖಡ್ಗ ಮತ್ತು ಟ್ರೋಫಿ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು .


ದೇಶ ಕಾಯುವ ಸೈನಿಕರ ಎದುರಿಗೆ ವೈರಿಗಳಿರುತ್ತಾರೆ. ಅವರನ್ನು ಕೊಲ್ಲಬೇಕು ಇಲ್ಲವೇ ಅವರ ಗುಂಡಿಗೆ ಬಲಿಯಾಗಬೇಕು. ಎರಡೇ ಆಯ್ಕೆ ಇರುತ್ತದೆ ಅದರೆ ಪೋಲಿಸರ ಕರ್ತವ್ಯ ಇದಕ್ಕಿಂತ ಕಠಿಣವಾದುದು ನೀವು ಸಮಾಜದಲ್ಲಿ ನಿಮ್ಮವರ ವಿರುದ್ಧವೇ ನಿಲ್ಲಬೇಕಾದ ಅನಿವಾರ್ಯತೆ ಇದೆ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುತ್ತೇನೆ ಎಂದು ರಾಷ್ಟ್ರಧ್ವಜದ ಮೇಲೆ ಪ್ರಮಾಣ ಮಾಡಿದ್ದೀರಿ ರಾಷ್ಟ್ರಧ್ವಜವು ನೂರ ಮೂವತ್ತು ಕೋಟಿ ಜನರ ಆತ್ಮವಾಗಿದೆ ಈ ಪ್ರತಿಜ್ಞೆ ಮಾಡಿ ಮರೆತರೆ ಶಾಪ ತಟ್ಟುತ್ತದೆ ಎಂದು ಎಚ್ಚರಿಸಿದರು’

ವಿದ್ಯಾವಂತರು ಹೆಚ್ಚಾದಂತೆ ಅಪರಾಧ ಕೃತ್ಯಗಳು ಕಡಿಮೆಯಾಗಬೇಕಿತ್ತು ಆದರೆ ಹೆಚ್ಚಾಗುತ್ತಿದೆ. ಇದು ಕಳವಳಕಾರಿ ಸದ್ಯ ನಾವು ನೀಡುವ ಶಿಕ್ಷಣದಿಂದ ಒಳ್ಳೆಯ ಅಧಿಕಾರಿಗಳನ್ನು ತಯಾರಿಸಲು ಸಾಧ್ಯವಾಗಿದೆಯೇ ಹೊರತು ಮೌಲ್ಯಗಳನ್ನು ಬಿತ್ತಲು ಆಗಲಿಲ್ಲ .ಇಂಥದರಲ್ಲೂ ಇಂಜಿನಿಯರಿಂಗ್ ಮೆಡಿಕಲ್ ಎಂಬಿಎ ಸೇರಿದಂತೆ ಹಲವು ಪದವಿಗಳನ್ನು ಪಡೆದ ಹಲವು ಪದವೀಧರರು ಪೊಲೀಸ್ ಇಲಾಖೆ ಸೇರುತ್ತಿದ್ದಾರೆ ಅವರ ಜ್ಞಾನ ಮತ್ತು ಕೌಶಲ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದು ಡಿ.ಎಸ್.ಪಿ ಮತ್ತು ಪೋಲಿಸ್ ಸಬ್ಇನ್ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಸಮಾರಂಭದಲ್ಲಿ ಅವರು ಗೌರವ ವಂದನೆ ಸ್ವೀಕರಿಸಿ ಹೇಳಿದರು .


ಸಮಾರಂಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ ಪಾಟೀಲ್ ರೇವೂರ , ಶಾಶಕ ಬಸವರಾಜ ಮತ್ತಿಮೂಡ , ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ , ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ , ಈಶಾನ್ಯ ವಲಯದ ಐಜಿಪಿ ಮುನೀಶ್ ಖರ್ಬೀಕರ್ , ನಗರ ಪೊಲೀಸ್ ಆಯುಕ್ತ ಡಾ॥ ವೈ. ಎಸ್. ರವಿಕುಮಾರ್ , ಡಿಸಿಪಿ ಅಡ್ಡೂರು ಶ್ರೀನಿವಾಸಲು , ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್. ಪಿ. ಜಿ.ಕೆ.ರಶ್ಮಿ , ಜೆಸ್ಕಾಂ ಎಸ್ ಪಿ ಸವಿತಾ ಹೂಗಾರು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಕೆಎಸ್ ಆರ್ ಪಿ ಕಮಾಂಡೆಂಟ್ ಬಸವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಕು॥ ನಿಧಿ ಬಿ.ಎನ್. ಬಂಟ್ವಾಳ ಎಸ್ ವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ನಾರಾಯಣ ಭಂಡಾರಿ ಬೊಟ್ಯಾಡಿ ಮತ್ತು ಬಂಟ್ವಾಳ ಬಿಎಸ್ಸೆನ್ನೆಲ್ ನ ನಿವೃತ್ತ ಅಧಿಕಾರಿ ಯಶೋದಾ ದಂಪತಿಯ ಪುತ್ರಿ .

ಬಂಟ್ವಾಳ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿ ಎಸ್.ವಿ.ಎಸ್.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಏಳನೇ ೦್ಯಾಂಕ್ ‍‍ ನೊಂದಿಗೆ ಪದವಿಯನ್ನು ಪಡೆದಿದ್ದರೆ ಕೆ.ಎ.ಎಸ್.ಪರೀಕ್ಷೆ ಬರೆದಿರುವ ಇವರು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ
ವೃತ್ತಿ ಜೀವನದ ಆರಂಭದಲ್ಲಯೇ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾಗಿರುವ ನೀವು ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂಬ ಹೆಸರಿಗೆ ಪಾತ್ರರಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ಪಡೆಯುವ ಅವಕಾಶ ದೊರೆಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

1 thought on “ಪೋಲಿಸ್ ಸಬ್ಇನ್ಸ್ ಪೆಕ್ಟರ್ ತರಬೇತಿ ಅವಧಿಯಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದ ನಿಧಿ ಬಿ.ಎನ್. ಬಂಡಸಾಲೆ ಬಂಟ್ವಾಳ

Leave a Reply

Your email address will not be published. Required fields are marked *