ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಉಷಾ ಆರ್. ಭಂಡಾರಿ ದಂಪತಿಯ ಸುಪುತ್ರಿ
ಡಾ॥ ನಿಧಿ ಆರ್. ಶಿರಾಳಕೊಪ್ಪ
ಇವರು 2019 ಸಾಲಿನಲ್ಲಿ ನಡೆದ ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ವೈದ್ಯಕೀಯ ಅಂತಿಮ ಹಂತದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿರಾಳಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 95 % ಅಂಕದೊಂದಿಗೆ ಉತ್ತೀರ್ಣರಾಗಿದ್ದನಿಧಿ ಆರ್. ಶಿರಾಳಕೊಪ್ಪ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಪಿ.ಯು.ಸಿ ಶಿಕ್ಷಣ ಪೂರೈಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರತಿಷ್ಠಿತ ಕುರುಂಜಿ ವೆಂಕಟ್ರಮಣ ಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದು ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ವೆೃದ್ಯಕೀಯ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಡಾ॥ ನಿಧಿ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಆಸ್ಪತ್ರೆಯಲ್ಲಿ ಮತ್ತು ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಸಂಪಾಜೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ಡಾ॥ ನಿಧಿ ಆರ್. ರಮೇಶ್ ಭಂಡಾರಿ ಯವರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ನವದೆಹಲಿಯಲ್ಲಿ ನಡೆದ ಇನ್ಸ್ಪೈರ್ಡ್ ಅವಾಡ್೯ಗೆ ರಾಜ ಪ್ರತಿನಿಧಿಯಾಗಿ ರಾಷ್ಟ್ರಮಟ್ಟ ದಲ್ಲಿ ಭಾಗವಹಿಸಿದ್ದರು.
ಶ್ರೀ ರಮೇಶ್ ಭಂಡಾರಿಯವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಂಗಳೂರಿನವರು ಶಿವಮೊಗ್ಗದ K.M.F. ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಉಷಾ ಆರ್.ಭಂಡಾರಿಯವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತಂಡಬೈಲ್ ನವರು ಪ್ರಸ್ತುತ ಶಿರಾಳಕೊಪ್ಪದಲ್ಲಿ ನೆಲೆಸಿದ್ದಾರೆ.
ಶ್ರೀ ರಮೇಶ್ ಭಂಡಾರಿ ಶಿರಾಳಕೊಪ್ಪ ಮತ್ತು ಶ್ರೀಮತಿ ಉಷಾ ಆರ್. ಭಂಡಾರಿ ಮಗಳ ಸಾಧನೆಯ ಬಗ್ಗೆ ಸಂತಸವನ್ನು ಭಂಡಾರಿ ವಾರ್ತೆ ಜೊತೆಗೆ ಹಂಚಿಕೊಂಡರು.
ಡಾ॥ ನಿಧಿ ಅವರ ಸಹೋದರಿ ಶ್ರೇಯಾ ಆರ್. ಇವರು ಉಡುಪಿ ಜಿಲ್ಲೆಯ ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ BAMS ವ್ಯಾಸಂಗ ಮಾಡುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ॥ ನಿಧಿ ಆರ್ ಶಿರಾಳಕೊಪ್ಪ ಇವರು ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಅತ್ಯುತ್ತಮ ಸೇವೆ ಲಭಿಸುವಂತಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸಿ ಭಗವಂತನಲ್ಲಿ ಪ್ರಾರ್ಥಿಸುತ್ತದೆ.
ವರದಿ : ಭಂಡಾರಿ ವಾರ್ತೆ
ನಿಮ್ಮ ಕಾರ್ಯ ಸ್ತುತ್ಯಾರ್ಹ.
ಬಂಡಾರಿ.. …ಸಮುದಾಯ ದ ಅಭಿವೃದ್ಧಿಗೆ , ಸಂಘಟನೆಗೆ…ವಿಭಿನ್ನ ಪ್ರಯತ್ನ.
ಅಭಿನಂದನೆಗಳು.
ತಮ್ಮಣ್ಣ ಮಾದಾ ಪಟ್ಟಣ
ಕಾರ್ಯದರ್ಶಿ
ಸವಿತಾ ಸಮಾಜ ಸರ್ಕಾರಿ ನೌಕರರ ಸಂಘ (ರಿ) ಮೈಸೂರು.
8150830905 (watsup)