
ಬಂಗಾಡಿ ದಿವಂಗತ ದಯಾನಂದ ಭಂಡಾರಿ ಮತ್ತು ಮೂಡುಬಿದಿರೆ ನಾಗರಕಟ್ಟೆಯ ಮಾಲತಿ ದಯಾನಂದ ಭಂಡಾರಿಯವರ ಪುತ್ರ ಚಿ||ಪದ್ಮನಾಭ ಭಂಡಾರಿ ಯವರ ವಿವಾಹ ಬೆಳ್ತಂಗಡಿ ತಾಲೂಕು ವೇಣೂರು ಅಂಡಿಂಜೆ ಗ್ರಾಮದ ಶ್ರೀ ಸುಂದರ್ ಭಂಡಾರಿ ಮತ್ತು ಶ್ರೀಮತಿ ಅರುಣ ಸುಂದರ್ ಭಂಡಾರಿಯವರ ಪುತ್ರಿ ಚಿ||ಸೌ||ಮೇಘಾ ರೊಂದಿಗೆ ಫೆಬ್ರವರಿ 7ರ ಬುಧವಾರ ಮೂಡುಬಿದಿರೆ ಓಂಟೆಕಟ್ಟೆ ಸಂಜೀವ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ವೈಭವದಿಂದ ಜರುಗಿತು. ಉಪಸ್ಥಿತರಿದ್ದ ನೂರಾರು ಸಮಾಜ ಬಾಂಧವರು, ಹಿತೈಷಿಗಳು, ಸ್ನೇಹಿತರು ಹಾಗೂ ಬಂಧು ಬಾಂಧವರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ನೂತನ ವಧುವರರಿಗೆ ಹರಸಿ ಶುಭ ಹಾರೈಸಿದರು. 

ಮದುವೆಯ ಅನುಬಂಧದಲ್ಲಿ ಒಂದಾದ ಪದ್ಮನಾಭ ಮತ್ತು ಮೇಘಾ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಕರುಣಿಸಿ,ಅವರ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ.